ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ನಾವು ಯಾವುದೇ ಅವ್ಯಹಾರ ನಡೆಸಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಕೊರೊನಾ ವಿಚಾರದಲ್ಲಿ 2 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಬಿಜೆಪಿಯ ಐದು ಮಂದಿ ಸಚಿವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಆರ್.ಅಶೋಕ್, ಯಾವುದೇ ದಾಖಲೆಯಿಲ್ಲದೇ ವಿಪಕ್ಷ ನಾಯಕರು ದಾರಿ ತಪ್ಪಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ರು. 50 ವರ್ಷ ರಾಜ್ಯವನ್ನಾಳಿ ಲೂಟಿ ಮಾಡಿದ ಕಾಂಗ್ರೆಸ್ ಈಗ ಕೊರೊನಾ ಸಂಕಷ್ಟ ಸಮಯದಲ್ಲಿ ಆರೋಪ ಮಾಡುತ್ತಿದೆ. ಕಷ್ಟದಲ್ಲಿರುವ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತಲು ವಿಪಕ್ಷ ನಾಯಕರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ರು.
ವೆಂಟಿಲೇರ್ ಖರೀದಿ ವಿಚಾರದಲ್ಲಿ ಅವ್ಯವಹಾರ ಆರೋಪ ಮಾಡಿದ್ದಾರೆ. ನೆರೆ ರಾಜ್ಯದಲ್ಲಿ 4 ಲಕ್ಷಕ್ಕೆ ಖರೀದಿಯಾದ್ರೆ ನಮ್ಮಲ್ಲಿ 18 ಲಕ್ಷಕ್ಕೆ ಖರೀಸಿದ್ದಾರೆ ಎಂದಿದ್ದಾರೆ. ಹಾಗಾದ್ರೆ ಕಳೆದ ವರ್ಷ ಜನವರಿ 8ರಂದು 21 ಲಕ್ಷಕ್ಕೆ ವೆಂಟಿಲೇರ್ ಅನ್ನು ಚಂದ್ರಲೋಕದಿಂದ ಖರೀದಿ ಮಾಡಿದ್ರಾ..? ಆಗ ಆಡಳಿತದಲ್ಲಿ ಯಾರಿದ್ದರೂ ಅನ್ನೋದನ್ನ ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ರು.
ಇಡೀ ದೇಶವೇ ಕೊರೊನಾ ವಿರುದ್ಧ ಹೋರಾಡುತ್ತಿದೆ. ಈ ವೇಳೆ 14 ಲಕ್ಷಕ್ಕೆ 9, ಯುನಿಟ್, 15 ಲಕ್ಷಕ್ಕೆ 28 ಯುನಿಟ್ ಗಳಲ್ಲಿ ಖರೀದಿ ಮಾಡಲಾಗಿದೆ . ಕೇರಳದವರು 2.94 ಲಕ್ಷಕ್ಕೆ ಐಫ್ಲೋ ನಾಜಲ್ ಖರೀದಿ ಮಾಡಿದ್ದಾರೆ. ನಾವು ಕೇರಳಕ್ಕಿಂತ ಕಡಿಮೆ ದರದಲ್ಲಿ 2.83 ಲಕ್ಷಕ್ಕೆ ಐಫ್ಲೋ ನಾಜಲ್ ಖರೀದಿ ಮಾಡಿದ್ದೀವಿ ಎಂದು ವಿವರ ನೀಡಿದ್ರು. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದನ್ನು ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕು ಎಂದು ಕುಟುಕಿದರು.