Monday, June 8, 2026
spot_imgspot_img
spot_imgspot_img

ನಟಿ ರಾಗಿಣಿ ದ್ವಿವೇದಿ ಸಿಸಿಬಿ ವಶಕ್ಕೆ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲ ನಂಟು ಆರೋಪಕ್ಕೆ ಸಂಬಂಧಿಸಿ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಯಲಹಂಕದಲ್ಲಿರುವ ನಟಿ ರಾಗಿಣಿ ನಿವಾಸದ ಮೇಲೆ ದಾಳಿ ಮಾಡಿದ ಸಿಸಿಬಿ ಟೀಂ, ಸತತ ಮೂರೂವರೆ ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಬಳಿಕ ರಾಗಿಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಆರೋಪಕ್ಕೆ ಸಂಬಂಧಿಸಿ ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಶೋಧ ಕಾರ್ಯಾಚರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ರಾಗಿಣಿ ಮನೆಯಲ್ಲಿದ್ದ ಮೊಬೈಲ್ ಫೋನ್, ಮನೆ ಕೀ, ಕಾರಿನ ಕೀ ಯನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.

ಮೊದಲಿಗೆ ಸಿಸಿಬಿಯಿಂದ ರಾಗಿಣಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಯಲಿದೆ. ಬಳಿಕ ರಾಗಿಣಿ ಆಪ್ತ ರವಿಶಂಕರ್ ಜತೆ ಕೂರಿಸಿ ಜಂಟಿ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಅನಾರೋಗ್ಯ ಕಾರಣ ನೀಡಿ ನಿನ್ನೆ ಸಿಸಿಬಿ ವಿಚಾರಣೆಗೆ ನಟಿ ರಾಗಿಣಿ ಗೈರಾಗಿದ್ದರು. ಆದರೆ ಇಂದು ವಿಚಾರಣೆಗೆ ಹಾಜರಾಗಲೇಬೇಕು ಸಿಸಿಬಿ ಮತ್ತೆ ನೋಟಿಸ್ ಕೊಟ್ಟಿತ್ತು. ಆದರೆ ಸಾಕ್ಷ್ಯ ನಾಶಪಡಿಸುವ ಅನುಮಾನ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ನಟಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

- Advertisement -

Related news

error: Content is protected !!