Friday, June 19, 2026
spot_imgspot_img
spot_imgspot_img

ರಾಗಿಣಿಯ ಮೊದಲ ರಾತ್ರಿ ಸಂಜನಾಗೆ ಢವಢವ

- Advertisement -
- Advertisement -

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ರಾಗಿಣಿ ಮೊದಲ ರಾತ್ರಿ ಕಳೆದಿದ್ದಾರೆ.

ಸ್ಯಾಂಡಲ್​​ವುಡ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಜೈಲು ಪಾಲಾಗಿದ್ದಾರೆ. ಇದರ ಬೆನ್ನ ಹಿಂದೆಯೇ ಬಂಧಿತ ನಟಿ ಸಂಜನಾ ಅವರನ್ನು ಇನ್ನೆರಡು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸಂಜನಾ ವಿಚಾರಣೆಯ ವೇಳೆಯಲ್ಲಿ ಯಾವುದೇ ವಿಚಾರವನ್ನೂ ಬಾಯ್ಬಿಟ್ಟಿಲ್ಲ.

ನಟಿ ರಾಗಿಣಿ ದ್ವಿವೇದಿ ಜೈಲು ಸೇರಿದ್ರೆ, ಸಂಜನಾ ಗರ್ಲಾನಿ ಸಿಸಿಬಿ ವಶದಲ್ಲಿದ್ದಾರೆ. ರಾಗಿಣಿ ಜೈಲಿನಲ್ಲಿ ಕಣ್ಣೀರಿಟ್ಟಿದ್ರೆ, ಸಂಜನಾಗೆ ಸಿಸಿಬಿ ಭಯ ಶುರುವಾಗಿದೆ.

ಮಾರಾಟಕ್ಕಿದೆ ರಾಗಿಣಿಯ ಫ್ಲ್ಯಾಟ್ ಎರಡು ಕೋಟಿ ರೂಪಾಯಿ ಬೆಲೆ

ಮಾದಕ ದ್ರವ್ಯ ಜಾಲದ ನಂಟಿನ ಆರೋಪ ಎದುರಿಸುತ್ತಿರುವ ನಟಿ ರಾಗಿಣಿ ತಮ್ಮ ಫ್ಲ್ಯಾಟ್ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ರಾಗಿಣಿ ಅವರ ತಂದೆ ರಾಕೇಶ್ ದ್ವಿವೇದಿ ಖಾಸಗಿ ವೆಬ್ ಸೈಟ್ ನಲ್ಲಿ ಈ ಸಂಬಂಧ ಜಾಹೀರಾತು ನೀಡಿದ್ದಾರೆ.

ಬೆಂಗಳೂರಿನ ನ್ಯಾಯಾಂಗ ಬಡಾವಣೆಯಲ್ಲಿ ಇರುವ ಈ ಫ್ಲ್ಯಾಟ್ ಮೌಲ್ಯ ಎರಡು ಕೋಟಿ ರೂಪಾಯಿ ಎಂದು ಅವರು ನಮೂದಿಸಿದ್ದಾರೆ. ಪುತ್ರಿಯ ಬಂಧನದಿಂದಾಗಿ ಅವಮಾನಕ್ಕೊಳಗಾಗಿರುವ ಅವರ ತಂದೆ ಇನ್ನು ಮುಂದೆ ಈ ಮನೆಯಲ್ಲಿ ವಾಸ ಮಾಡಲು ಇಚ್ಚಿಸುತ್ತಿಲ್ಲ ಎಂದು ಹೇಳಲಾಗಿದೆ. ಮೂರು ಬೆಡ್ ರೂಮ್ ಗಳಿರುವ ಫ್ಲ್ಯಾಟ್ ಇದಾಗಿದೆ.

- Advertisement -

Related news

error: Content is protected !!