- Advertisement -
- Advertisement -


ರಾಯಿ: ಬಂಗೇರ ಕುಟುಂಬಸ್ಥರ ತರವಾಡು ಮನೆ ಮೇಲಿನ ಕೈರೋಳಿ ರಾಯಿ(ರಿ) ಇಲ್ಲಿ ನೂತನ ತರವಾಡು ಮನೆಯ ಗೃಹಪ್ರವೇಶ ದೈವಗಳ ಪುನರ್ ಪ್ರತಿಷ್ಠೆ ಹಾಗೂ ಕೋಲೋತ್ಸವ ನಡೆಯಿತು.




ಏಪ್ರಿಲ್ 1 ನೇ ಮಂಗಳವಾರ ವಾಸ್ತು ಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಏಪ್ರಿಲ್ 2 ನೇ ಬುಧವಾರ ಬೆಳಗ್ಗೆ ಗಣಪತಿ ಹವನ ನಡೆದು ಬಳಿಕ ಮಂತ್ರದೇವತೆ, ಹಿರಿಯಜ್ಜ, ಬಂಟ ದೈವ, ಕುಪ್ಪೆಟ್ಟು ಪಂಜುರ್ಲಿ, ಕುಟುಂಬದ ಕಲ್ಲುರ್ಟಿ ಪಂಜುರ್ಲಿ, ರಾಹು ಗುಳಿಗ ದೈವಗಳ ಪ್ರತಿಷ್ಠೆ, ನಾಗದೇವರಿಗೆ ನಾಗ ತಂಬಿಲ ನಡೆಯಿತು. ಬಳಿಕ ಶ್ರೀ ಸತ್ಯ ನಾರಾಯಣ ಪೂಜೆ ನಡೆದು ಬಳಿಕ ವೆಂಕಟರಮಣ ದೇವರಿಗೆ ಮುಡಿಪು ಕಟ್ಟುವ ಕಾರ್ಯಕ್ರಮ ನಡೆಯಿತು. ನಂತರ ಅನ್ನ ಸಂತರ್ಪಣೆ ನಡೆಯಿತು.



ನಂತರ ಸಂಜೆ 4 ಗಂಟೆಗೆ ಕೆಲಿಂಜೇಶ್ವರಿ ಮಕ್ಕಳ ಕುಣಿತಾ ಭಜನಾ ಮಂಡಳಿ ಕೆಲಿಂಜ ಇವರಿಂದ ಕುಣಿತಾ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ದೈವಗಳ ಭಂಡಾರ ಏರಿ ನಂತರ ಕೋಲೋತ್ಸವ ನಡೆಯಿತು.



ಕಾರ್ಯಕ್ರಮದಲ್ಲಿ ಬಂಗೇರ ಕುಟುಂಬಸ್ಥರು ಸೇರಿದಂತೆ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

- Advertisement -