Saturday, April 27, 2024
spot_imgspot_img
spot_imgspot_img

ಬಂಟ್ವಾಳ: ಚಲನಚಿತ್ರ ನಟಿ ರಾಧಿಕಾ ಮನೆಯ ಕೆಲಸದಾಳು ನಾಪತ್ತೆ..!!

- Advertisement -G L Acharya panikkar
- Advertisement -

ಬಂಟ್ವಾಳ: ಚಲನಚಿತ್ರ ನಟಿ ರಾಧಿಕಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ.

ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲುಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಕಾಣೆಯಾದ ಮಹಿಳೆ.‌ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ಚಲನ ಚಿತ್ರ ನಟಿ ರಾಧಿಕ ಅವರ ಎಸ್ಟೇಟ್‌ ನಲ್ಲಿ ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ನಾಗರತ್ನ ಇದೀಗ ಕಾಣೆಯಾಗಿರುವುದು. ‌ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಯಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು.

ಅ.13ರಂದು ಗಂಡ ಹೆಂಡತಿ ಇಬ್ಬರು ಎಸ್ಟೇಟ್ ನಲ್ಲಿ ಕೆಲಸಕ್ಕೆ ಹೋಗಿದ್ದು, ಬೆಳಿಗ್ಗೆ 10.30ರ ವೇಳೆಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ‌ಎಂದು ಹೋದವಳು ಮತ್ತೆ ಕೆಲಸದ ಕಡೆ ಬಂದಿಲ್ಲ. ಚಹಾ ಕುಡಿಯಲು ಹೋದವಳು ಬಂದಿಲ್ಲ ಎಂದು ‌ಮನೆ ಕಡೆ ಹೋಗಿ‌ ನೋಡಿದಾಗ ಆಕೆ ಮನೆಯಲ್ಲಿರದೆ ಕಾಣೆಯಾಗಿದ್ದಳು.

ಮನೆಯಿಂದ ಹೋಗುವಾಗ ಬಟ್ಟೆ , ಆಧಾರ್ ಕಾರ್ಡ್, ನಗದು ಸಮೇತ ತೆರಳಿದ್ದು ಗಮನಕ್ಕೆ ಬಂದಿದೆ. ಅವಳು ಹಿಂದೆ ಗಂಡನ‌ ಜೊತೆ ಮುನಿಸಿಕೊಂಡು ಧರ್ಮಸ್ಥಳ, ಮಂಗಳೂರು ಕಡೆ ಹೋಗಿ ತಿರುಗಾಡಿಕೊಂಡು ವಾಪಸು ಬರುತ್ತಿದ್ದಳು. ಇದು ಅದೇ ರೀತಿ ಹೋಗಿರಬಹುದು ಅಂದು‌ಕೊಂಡಿದ್ದ ಗಂಡನಿಗೆ ಅ.14.ರಂದು‌ ಮರುದಿನ ಪೋನ್ ಮಾಡಿದ ಅವಳು ನನ್ನನ್ನು ಹುಡುಕಬೇಡಿ ನಾನು ದೂರ ಹೋಗುತ್ತೇನೆಂದು ತಿಳಿಸಿದ್ದಾಳೆ.

ಇದೀಗ ‌ಮೊಬೈಲ್ ಸ್ವಿಚ್ ಆಪ್ ಆಗಿದ್ದು, ನಾಪತ್ತೆಯಾಗಿದ್ದಾಳೆ ಎಂದು ‌ಗಂಡ ದೂರು ನೀಡಿದ್ದಾಳೆ. ಈಕೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಂಟ್ವಾಳ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ.

- Advertisement -

Related news

error: Content is protected !!