Monday, May 6, 2024
spot_imgspot_img
spot_imgspot_img

ಚೆನ್ನಾಗಿ ಬ್ಯಾಗ್ರೌಂಡ್ ಬರುತ್ತೆ..! ಫೋಟೋ ತೆಗಿಸಿಕೊಳ್ಳುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದು ದುರ್ಮರಣ

- Advertisement -G L Acharya panikkar
- Advertisement -

ದಾವಣಗೆರೆ: ರೈಲ್ವೆ ಹಳಿ ಮೇಲೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಯುವಕನಿಗೆ ರೈಲು ಡಿಕ್ಕಿ ಹೊಡೆದ ಘಟನೆ ದಾವಣಗೆರೆ ಜಿಲ್ಲೆಯ ಡಿಸಿಎಂ ಟೌನ್ ಶಿಪ್ ಬಳಿ ನಡೆದಿದೆ. ಹಳಿ ಮೇಲೆ ಫೋಟೋ ತೆಗಿಸಿಕೊಳ್ತಿದ್ದ ಸಚಿನ್(16) ಮೃತ ದುರ್ದೈವಿ.

ಪಕ್ಕದ ಹಳಿಯಲ್ಲಿ ರೈಲು ಹೋಗುತ್ತದೆ ಎಂದು ಅಲ್ಲಿಯೇ ನಿಂತ ಪರಿಣಾಮ ರೈಲು ಡಿಕ್ಕಿಯಾಗಿದೆ. ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಒಳ್ಳೆಯ ಬ್ಯಾಗ್ರೌಂಡ್ ಸಿಗುತ್ತದೆ ಎಂದು ಹಳಿ ಮೇಲೆ ನಿಂತಿದ್ದ. ಆದರೆ ಯುವಕ ನಿಂತಿದ್ದ ಟ್ರ‍್ಯಾಕ್ ಮೇಲೆಯೇ ಬಂದ ರೈಲು ಡಿಕ್ಕಿಯಿಂದ ಯುವಕ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ನೇಹಿತರ ಜೊತೆ ಫೋಟೋ ಶೂಟ್‌ಗೆ ಹೋಗಿದ್ದ ಸಚಿನ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಸದ್ಯ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬ0ಧ ಪ್ರಕರಣ ದಾಖಲಿಸಿದ್ದಾರೆ.

vtv vitla
vtv vitla
vtv vitla
- Advertisement -

Related news

error: Content is protected !!