Tuesday, August 4, 2026
spot_imgspot_img
spot_imgspot_img

ಭಾರಿ ಮಳೆಗೆ ಬೆಂಗಳೂರಿನ ಹಲವು ಬಡಾವಣೆಗಳಿಗೆ ಜಲ ದಿಗ್ಬಂಧನ; ಬೋಟ್‌ಗಳಲ್ಲಿ ಜನರ ಸ್ಥಳಾಂತರ

- Advertisement -
- Advertisement -

ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಹಲವು ಬಡಾವಣೆಗಳು, ಪ್ರಮುಖ ರಸ್ತೆಗಳು ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಒಂದೇ ದಿನ 132 ಮಿ. ಮೀ. ​ನಷ್ಟು ಮಳೆಯಾಗಿದ್ದು, ಹಲವೆಡೆ ಸಾಕಷ್ಟು ಅವಾಂತರಗಳು ಸಂಭವಿಸಿವೆ.

ಬೆಂಗಳೂರಿನ ವಸಂತ ನಗರ, ವಿಧಾನ ಸೌಧ, ಶಿವಾಜಿನಗರ, ರಾಜಭವನ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ಬಿಟಿಎಂ ಲೇಔಟ್, ಚಿಕ್ಕಪೇಟೆ, ಟೌನ್​​ಹಾಲ್​, ರಾಜಭವನ, ಕಬ್ಬನ್​ಪಾರ್ಕ್​, ಸಾಯಿ ಲೇಔಟ್‌, ಬಿಟಿಎಂ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌, ಎಲೆಕ್ಟ್ರಾನಿಕ್‌ ಸಿಟಿ, ಸಿಲ್ಕ್‌ ಬೋರ್ಡ್‌ ಸೇರಿ ಹಲವೆಡೆ ಸೋಮವಾರ ಸಂಜೆ ಕೂಡ ಭಾರಿ ಮಳೆಯಾಗಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿ ಸವಾರರು ಪರದಾಡುವಂತಾಗಿದೆ.ಸಾಯಿ ಲೇಔಟ್‌ ಸಂಪೂರ್ಣ ಜಲಾವೃತವಾಗಿದ್ದರಿಂದ ಮನೆಗಳಿಂದ ಜನರು ಹೊರಬರಲಾಗದೆ ಪರದಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್‌ ಸಿಬ್ಬಂದಿ, ರಬ್ಬರ್ ಬೋಟ್‌ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಜನರನ್ನು ಸ್ಥಳಾಂತರ ಮಾಡುತ್ತಿದ್ದಾರೆ.

- Advertisement -

Related news

error: Content is protected !!