Sunday, June 21, 2026
spot_imgspot_img
spot_imgspot_img

ಉಡುಪಿ: ಭಾರೀ ಗಾಳಿ ಮಳೆಗೆ 23 ಮನೆಗಳಿಗೆ ಹಾನಿ

- Advertisement -
- Advertisement -

ಉಡುಪಿ: ರೆಡ್‌ ಅಲರ್ಟ್ ಘೋಷಿಸಿರುವಂತೆ ಉಡುಪಿ ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದಲೇ ಭಾರೀ ಗಾಳಿ ಮಳೆ ಮುಂದುವರೆದಿದೆ. ಗಾಳಿಮಳೆಯ ಆರ್ಭಟಕ್ಕೆ ಹಲವು ಮನೆಗಳಿಗೆ ಹಾನಿಯಾಗಿವೆ. ಕಳೆದ 24 ಗಂಟೆ ಅವಧಿಯಲ್ಲಿ ಕಾರ್ಕಳ- 53.6ಮಿ.ಮೀ., ಕುಂದಾಪುರ -68.2ಮಿ.ಮೀ., ಉಡುಪಿ- 80.9ಮಿ.ಮೀ., ಬೈಂದೂರು-83.9ಮಿ.ಮೀ., ಬ್ರಹ್ಮಾವರ-93.3ಮಿ.ಮೀ., -48.9.., ໖-114.02.. .. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 76.1ಮಿ.ಮೀ. ಮಳೆ ಆಗಿರುವ ಬಗ್ಗೆ ವರದಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 22 ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಒಂದು ಮನೆಗೆ ಸಿಡಿಲು ಬಡಿದಿರುವ ಬಗ್ಗೆ ವರದಿಯಾಗಿದೆ. ಇದರಿಂದ ಒಟ್ಟು 7.70 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.ಕುಂದಾಪುರ ತಾಲೂಕಿನ ಕರ್ಕುಂಜೆ, ಹೆಸಕುತ್ತೂರು, ಕಸಬಾ, ಹಾರ್ದಳ್ಳಿ ಮಂಡಳ್ಳಿ, ಸೇನಾಪುರ, ಬೀಜಾಡಿ ಗ್ರಾಮಗಳ ಏಳು ಮನೆಗಳ ಮೇಲೆ ಭಾರೀ ಗಾಳಿಮಳೆಗೆ ಮರ ಬಿದ್ದು ಹಾನಿಯಾಗಿವೆ. ಕಾರ್ಕಳ ತಾಲೂಕಿನ ಇನ್ನಾ, ಹಿರ್ಗಾನ, ಕಾರ್ಕಳ, ಮಿಯಾರು ಗ್ರಾಮದ ಐದು ಮನೆಗಳು ಹಾಗೂ ಕಾಪು ತಾಲೂಕಿನ ಪಾದೂರು, ಕಳತ್ತೂರು, ಮಜೂರು ಗ್ರಾಮದ ಮೂರು ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿ ಅಪಾರ ನಷ್ಟವಾಗಿದೆ.

- Advertisement -

Related news

error: Content is protected !!