Sunday, September 6, 2026
spot_imgspot_img
spot_imgspot_img

ಕರಾವಳಿಯಲ್ಲಿ ಸೆ.15ರವರೆಗೆ ಮಳೆ ಮುನ್ಸೂಚನೆ; ಹವಾಮಾನ ಇಲಾಖೆ

- Advertisement -
- Advertisement -

ಮಂಗಳೂರು: ಬಂಗಾಳಕೊಲ್ಲಿ ಹಾಗೂ ಗುಜರಾತ್ ನಲ್ಲಿ ವಾಯುಭಾರ ಕುಸಿತ ಪರಿಣಾಮ ಸೆ.15ರ ವರೆಗೆ ದಕ್ಷಿಣ ಕರಾವಳಿಯಲ್ಲಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಭಾನುವಾರ ಕೂಡ ದ.ಕ. ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ನಸುಕಿನ ಜಾವ ಸುರಿಯಲಾರಂಭಿಸಿದ ಮಳೆ ಹಗಲು ಹೊತ್ತು ಆಗಾಗ ಸುರಿಯಿತು.

ಭಾನುವಾರ ಬೆಳಗ್ಗಿನವರೆಗೆ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಗರಿಷ್ಠ 49.8 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಶನಿವಾರ ಮತ್ತು ಭಾನುವಾರ ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಸಮುದ್ರದಲ್ಲಿ ಭಾರಿ ಗಾಳಿಯೊಂದಿಗೆ ಮಳೆಯಾಗುತ್ತಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಕಳೆದೆರಡು ದಿನಗಳಿಂದ ಗಾಳಿಮಳೆಯಿಂದ ಮೀನುಗಾರಿಕೆ ನಡೆಸಲಾಗದೇ ಬಂದರಿಗೆ ಹಿಂತಿರುಗುತ್ತಿದೆ.

- Advertisement -

Related news

error: Content is protected !!