Friday, November 8, 2024
spot_imgspot_img
spot_imgspot_img

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿ:

- Advertisement -
- Advertisement -

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಆರಂಭದಲ್ಲೇ ವರುಣದೇವ ಅಡ್ಡಿಪಡಿಸಿದ್ದಾನೆ. ಕೊರೋನಾ ವೈರಸ್‍ನಿಂದಾಗಿ ಸುಮಾರು ಮೂರು ತಿಂಗಳಿಂದ ಯಾವುದೇ ಕ್ರಿಕೆಟ್ ಪಂದ್ಯಗಳು ನಡೆದಿಲ್ಲ.ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟ ಕೇವಲ 17.4 ಓವರ್ ಗೆ ಸೀಮಿತವಾಯಿತು.ಕ್ವಾರೆಂಟೈನ್ ನಿಯಮಗಳನ್ನು ಪಾಲಿಸಿಕೊಂಡು ಉಭಯ ತಂಡಗಳು ಕ್ರಿಕೆಟ್ ಆಟಕ್ಕೆ ಮತ್ತೆ ಚಾಲನೆ ನೀಡಲಿವೆ.

ಸ್ವಲ್ಪ ತಡವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ನಡೆಸುವ ತೀರ್ಮಾನಿಸಿತು. ಪರ್ಯಾಯ ನಾಯಕ ಬೆನ್ ಸ್ಟೋಕ್ಸ್ ರ ಬ್ಯಾಟಿಂಗ್ ಮಾಡುವ ತೀರ್ಮಾನಕ್ಕೆ ಮೊದಲ ಶಾಕ್ ನೀಡಿದ್ದು ವಿಂಡೀಸ್ ಬೌಲರ್ ಶೆನಾನ್ ಗ್ಯಾಬ್ರಿಯಲ್. ಪಂದ್ಯದ ಎರಡನೇ ಓವರ್ ನಲ್ಲೇ ಡೊಮಿನಿಕ್ ಸಿಬ್ಲೆ ಅವರನ್ನು ಬೌಲ್ಡ್ ಮಾಡಿದರು.

ಹೆಚ್ಚುವರಿ ಡಿಆರ್‍ಎಸ್, ಚೆಂಡಿಗೆ ಎಂಜಲು ಹಾಕುವಂತಿಲ್ಲ. ಪರಸ್ಪರ ಶೇಕ್ ಹ್ಯಾಂಡ್ ಮಾಡುವಂತಿಲ್ಲ. ಒಬ್ಬರಿಗೊಬ್ಬರು ಅಪ್ಪಿಕೊಂಡು ಸಂಭ್ರಮಿಸುವಂತಿಲ್ಲ. ಮೈದಾನದಲ್ಲಿ ಪ್ರೇಕ್ಷಕರಿಲ್ಲ. ತಟಸ್ಥ ಅಂಪೈರ್‍ಗಳಿಲ್ಲ. ಹೀಗೆ ಕೆಲವೊಂದು ಹೊಸ ನಿಯಮದೊಂದಿಗೆ ಈ ಸರಣಿಯನ್ನು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳು ಆಡಲಿವೆ.ಕೋವಿಡ್-19 ಭೀತಿಯ ನಡುವೆಯೆ ನಡೆಯುತ್ತಿರುವ ಪಂದ್ಯ ಇದಾದ ಕಾರಣ ಪ್ರೇಕ್ಷಕರಿಗೆ ಕ್ರಿಡಾಂಗಣಕ್ಕೆ ಅನುಮತಿ ಇರಲಿಲ್ಲ.

- Advertisement -

Related news

error: Content is protected !!