Sunday, June 14, 2026
spot_imgspot_img
spot_imgspot_img

21 ವರ್ಷದ ವಿದ್ಯಾರ್ಥಿನಿ ತಿರುವನಂತಪುರ ಮೇಯರ್‌

- Advertisement -
- Advertisement -

ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರಂ ಮೇಯರ್‌ ಆಗಿ 21 ವರ್ಷದ ಮಹಿಳೆ ಆರ್ಯಾ ರಾಜೇಂದ್ರನ್‌ ಅವರು ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಇವರು ಭಾರತದ ಅತಿ ಕಿರಿಯ ಮೇಯರ್‌ ಎನ್ನಿಸಿಕೊಳ್ಳಲಿದ್ದಾರೆ.

ಇತ್ತೀಚಿನ ಮಹಾನಗರಪಾಲಿಕೆ ಚುನಾವಣೆಯಲ್ಲಿ ಮೂಡವನಮುಗಲ್‌ ವಾರ್ಡ್‌ ಸದಸ್ಯೆಯಾಗಿ ಆರ್ಯಾ ಆಯ್ಕೆಯಾಗಿದ್ದರು. ತಿರುವನಂತಪುರ ಪಾಲಿಕೆಯಲ್ಲಿ ಎಲ್‌ಡಿಎಫ್‌ಗೆ ಬಹುಮತ ದೊರೆತಿದ್ದು, ಆರ್ಯಾ ಅವರನ್ನು ಮೇಯರ್‌ ಆಗಿ ಚುನಾಯಿಸಲು ಸಿಪಿಎಂ ಜಿಲ್ಲಾ ಘಟಕ ನಿರ್ಣಯ ತೆಗೆದುಕೊಂಡಿದೆ. ಇದಕ್ಕೆ ರಾಜ್ಯ ಸಮಿತಿ ಅಂತಿಮ ಒಪ್ಪಿಗೆ ನೀಡಿದ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ.

- Advertisement -

Related news

error: Content is protected !!