Thursday, April 25, 2024
spot_imgspot_img
spot_imgspot_img

ಮೋದಿ-ಬೈಡನ್ ಜೋಡಿ ಅಮೆರಿಕಾ- ಭಾರತ ಸಂಬಂಧವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದೆ-ರಾಮ್ ಮಾಧವ್

- Advertisement -G L Acharya panikkar
- Advertisement -

ನವದೆಹಲಿ(ನ.9): ಅಮೆರಿಕಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಜೋಡಿಗೆ ಬಿಜೆಪಿ ನಾಯಕ ರಾಮ್ ಮಾಧವ್ ಶುಭಾಶಯ ಹೇಳಿದ್ದಾರೆ.

ಈ ವೇಳೆ ಮಾತನಾಡಿರುವ ರಾಮ್ ಮಾಧವ್. ಮೋದಿ-ಬೈಡನ್ ಜೋಡಿ ಅಮೆರಿಕಾ- ಭಾರತ ಸಂಬಂಧವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ ಎಂದು ಹೇಳಿದ್ದಾರೆ. ಅಮೆರಿಕಾ ಮತ್ತು ಭಾರತ ಪ್ರಜಾಪ್ರಭುತ್ವದ ಆದರ್ಶಗಳು, ಜಾಗತಿಕ ಶಾಂತಿ ವಿಚಾರದಲ್ಲಿ ಸದೃಢ ಸಂಬಂಧವನ್ನು ಹೊಂದಿವೆ. ಬೈಡನ್ ಮತ್ತು ಹ್ಯಾರಿಸ್ ಜೋಡಿ ಭಾರತ-ಅಮೆರಿಕಾ ಸಂಬಂಧವನ್ನು ಉನ್ನತ ಮಟ್ಟದಲ್ಲಿ ಮುಂದುವರೆಸಿಕೊಂಡು ಹೋಗುತ್ತಾರೆಂಬ ನಂಬಿಕೆಯಿದೆ ಎಂದಿದ್ದಾರೆ.

ಮೋದಿ ಮತ್ತು ಬೈಡನ್ ಇಬ್ಬರೂ ಒಬ್ಬರಿಗೊಬ್ಬರು ಒಬಾಮ ಆಡಳಿತದ ಸಮಯದಿಂದಲೂ ಒಳ್ಳೆಯ ಪರಿಚಯ ಹೊಂದಿದ್ದಾರೆ. ಅವರು ಈ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ ಎನ್ನುವ ನಂಬಿಕೆ ಇದೆ. ಇನ್ನು ಕಮಲ ಹ್ಯಾರಿಸ್ ವೈಸ್ ಪ್ರೆಸಿಡೆಂಟ್ ಆಗಿ ಚುನಾಯಿತರಾಗಿರುವುದು ಅಮೆರಿಕಾದ ಪ್ರಜಾಪ್ರಭುತ್ವದ ಸ್ಪಂದನೆಯನ್ನು ಪ್ರತಿನಿಧಿಸುತ್ತದೆ. ಕಮಲಾ ಹ್ಯಾರಿಸ್ ಅವರು ವಿಶೇಷ ಶುಭಾಷಯಗಳಿಗೆ ಅರ್ಹರಾಗಿದ್ದಾರೆ ಎಂದು ರಾಮ್ ಮಾಧವ್ ಹೇಳಿದ್ದಾರೆ.

- Advertisement -

Related news

error: Content is protected !!