ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ 5ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನಡೆಸಲಿದ್ದಾರೆ. ಆದರೆ ವಿಶೇಷ ಏನೆಂದ್ರೆ ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಹೂರ್ತ ನಿಗದಿ ಮಾಡಿರುವುದು ಕರ್ನಾಟಕದವರು.
![](https://vtvvitla.com/wp-content/uploads/2020/07/IMG-20200624-WA0016.jpg)
ಹೌದು..ಬೆಳಗಾವಿ ಜಿಲ್ಲೆಯ ಎನ್.ಆರ್.ವಿಜಯೇಂದ್ರ ಎಂಬುವವರು ಈ ಮುಹೂರ್ತವನ್ನು ಈ ನಿಗದಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇವರು ರಾಘವೇಂದ್ರಸ್ವಾಮಿ ನವವೃಂದಾವನದ ವಿದ್ಯಾವಿಹಾರ ವಿದ್ಯಾಲಯದ ಕುಲಪತಿಗಳಾಗಿದ್ದಾರೆ. ರಾಮಮಂದಿರ ನಿರ್ಮಾಣ ಟ್ರಸ್ಟ್ ಇವರನ್ನು ನೇರವಾಗಿ ಸಂಪರ್ಕಿಸಿ ರಾಮಮಂದಿರ ನಿರ್ಮಾಣದ ಶಿಲಾನ್ಯಸಕ್ಕೆ ಮುಹೂರ್ತ ನಿಗದಿ ಮಾಡುವಂತೆ ಮನವಿ ಮಾಡಿತ್ತು. ಈ ಹಿನ್ನಲೆಯಲ್ಲಿ ಎನ್.ಆರ್.ವಿಜಯೇಂದ್ರ ಅವರು ಮೂರ ಶುಭ ದಿನಾಂಕಗಳನ್ನು ತಿಳಿಸಿದ್ದರು. ಅದರಲ್ಲಿ ಆಗಸ್ಟ್ 5ರಂದು ಆಯ್ಕೆ ಮಾಡಿಕೊಳ್ಳಲಾಗಿದೆ.
![](https://vtvvitla.com/wp-content/uploads/2020/07/IMG-20200624-WA0014-2.jpg)
ಭೂಮಿಪೂಜೆಗೆ ಬದ್ರಿನಾಥದಿಂದ ಮಣ್ಣು, ಅಲಕಾನಂದ ನದಿಯಿಂದ ನೀರು:
ಇನ್ನು ರಾಮಮಂದಿರ ಭೂಮಿ ಹಿನ್ನಲೆಯಲ್ಲಿ ಉತ್ತರಾಖಂಡ್ ಬದ್ರಿನಾಥದಿಂದ ಮಣ್ಣು ಹಾಗೂ ಗಂಗಾನದಿಯ ಉಪನದಿಯಿಂದ ನೀರನ್ನು ಅಡಿಗಲ್ಲು ಹಾಕುವ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಹೀಗಾಗಿ ವಿಶ್ವ ಹಿಂದೂ ಪರಿಷತ್ ನ ನಿಯೋಗ, ಮಣ್ಣು ಹಾಗೂ ನೀರಿನ ಕಳಶವನ್ನು ತೆಗೆದುಕೊಂಡು ಹೋಗಿದೆ.
![](https://vtvvitla.com/wp-content/uploads/2020/07/Datta-Kripa-Finace-Logo-for-ADVT-5.jpg)