Wednesday, September 23, 2026
spot_imgspot_img
spot_imgspot_img

ರಾಮನಗರ : ಹಳ್ಳದ ನೀರಲ್ಲಿ ಮುಳುಗಿ ಇಬ್ಬರು ಮಕ್ಕಳು ದುರ್ಮರಣ

- Advertisement -
- Advertisement -

ರಾಮನಗರ: ಆಟವಾಡಲು ತೋಟಕ್ಕೆ ಹೋಗಿದ್ದ ಮಕ್ಕಳು  ಹಳ್ಳದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕನಕಪುರ ತಾಲೂಕಿನ ಗುಣಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶ್ರೀನಿವಾಸ್ ಹಾಗೂ ಪದ್ಮಾವತಿ ಪುತ್ರ ಮಧು (14) ಹಾಗೂ ನಾರಾಯಣ್-ಮಾಧುರಿ ಎಂಬುವವರ ಪುತ್ರ ಶ್ರೀಹರಿ (8) ಮೃತ ಮಕ್ಕಳು.

ಕೆಲ ದಿನಗಳಿಂದ ಸುರಿದ ಮಳೆಯಿಂದ ಗ್ರಾಮದ ಹೊರವಲಯದ ಹಳ್ಳ ತುಂಬಿತ್ತು. ನಿನ್ನೆ ತೋಟಕ್ಕೆ ಆಟವಾಡಲು ಹೋಗಿದ್ದ ಮಕ್ಕಳು, ಹಳ್ಳದಲ್ಲಿ ಈಜಾಡುವಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!