Friday, April 26, 2024
spot_imgspot_img
spot_imgspot_img

ಹೊಸ ಮರಳುಗಾರಿಕೆ ನೀತಿಯಿಂದ ಸರ್ಕಾರದ ರಾಜಧನಕ್ಕೆ ಕುತ್ತು: ರಮಾನಾಥ ರೈ

- Advertisement -G L Acharya panikkar
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 9 ತಿಂಗಳಿಂದ ಸಿಆರ್​ಝಡ್ ಪರವಾನಿಗೆ ಇಲ್ಲದೆ ಮರಳುಗಾರಿಕೆ ನಡೆಯುತ್ತಿದೆ. ಬಿಜೆಪಿ ಶಾಸಕರ ಹಾಗೂ ಸರ್ಕಾರದ ಬೆಂಬಲದಿಂದ ಅಕ್ರಮ ಮರಳುಗಾರಿಕೆ ನಿರಾತಂಕವಾಗಿ ಸಾಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮರಳುಗಾರಿಕೆಗೆ ಹೊಸ ನೀತಿಯ ಅಗತ್ಯವಿಲ್ಲ. ಏಕೆಂದರೆ ಇದರಿಂದ ಸಂಪ್ರದಾಯ ಮರಳುಗಾರಿಕೆ ಮಾಡುವವರಿಗೆ ತೊಂದರೆ ಆಗುತ್ತದೆ. ಅಲ್ಲದೆ ಸರ್ಕಾರದ ಬೊಕ್ಕಸಕ್ಕೆ ಬರುವ ರಾಜಧನಕ್ಕೂ ಕುತ್ತು ತರಲಿದೆ ಎಂದು ಹೇಳಿದರು.ಹೊಸ ಮರಳುಗಾರಿಕೆ ನೀತಿಗೆ ಅನುವು ಮಾಡಿಕೊಟ್ಟಲ್ಲಿ ಸಂಪ್ರದಾಯ ಮರಳುಗಾರಿಕೆ ಸ್ಥಗಿತಗೊಂಡು ಅಕ್ರಮ ಮರಳುಗಾರಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮರಳುಗಾರಿಕೆ ಮಾಡುವವರಿಂದಲೂ ಈಗ ಚಾಲ್ತಿಯಲ್ಲಿರುವ ಮರಳುಗಾರಿಕೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದ್ದರಿಂದ ರಾಜ್ಯ ಸರ್ಕಾರದ ಗಣಿ ಸಂಸ್ಥೆಗೆ ಮರಳುಗಾರಿಕೆ ಪರವಾನಿಗೆ ನೀಡುವ ಬದಲು ಈ ಹಿಂದಿನವರಿಗೆ ಪರವಾನಿಗೆ ನೀಡಬೇಕು. 

ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿರುವ ಮರಳುಗಾರಿಕೆ ನೀತಿಗೆ ಸಾಕಷ್ಟು ಅಪಪ್ರಚಾರ, ಟೀಕೆಗಳು ವ್ಯಕ್ತವಾಗಿದ್ದವು. ಕ್ರಮೇಣ ಈ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 29.21 ಕೋಟಿ ರೂ. ರಾಜಧನ ದೊರಕಿತ್ತು. ಆದ್ದರಿಂದ ಹೊಸ ನೀತಿ ಅಕ್ರಮ ಮರಳುಗಾರಿಕೆಗೆ ಹಾದಿ ಮಾಡಿಕೊಟ್ಟು ಬೊಕ್ಕಸಕ್ಕೆ ಬರುವ ರಾಜಧನವೂ ಇಲ್ಲದಂತಾಗುತ್ತದೆ. ಹೊಸ ಮರಳುಗಾರಿಕೆ ನೀತಿಯ ಅಗತ್ಯವಿಲ್ಲ‌.ಈ ಸಂದರ್ಭ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್​​ಗಳಾದ ಹರಿನಾಥ್, ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಮುಖಂಡರಾದ ಶಾಲೆಟ್ ಪಿಂಟೊ, ಅನಿಲ್ ಡಿಸೋಜ, ಶುಭೋದಯ ಆಳ್ವ, ನೀರಜ್ ಪಾಲ್ ಮತ್ತಿತರರು ಇದ್ದರು.

- Advertisement -

Related news

error: Content is protected !!