Sunday, August 23, 2026
spot_imgspot_img
spot_imgspot_img

ರಾಮಕುಂಜ: ಯಾರು ಇಲ್ಲದ ವೇಳೆ ಮನೆಯೊಳಗೆ ನುಗ್ಗಿ ಕಳ್ಳತನ; ಅಪಾರ ಮೌಲ್ಯದ ಚಿನ್ನ-ನಗದು ಕಳವು..!

- Advertisement -
- Advertisement -

ರಾಮಕುಂಜ: ಮಹಿಳೆಯೋರ್ವರ ಮನೆಯಿಂದ ಯಾರು ಇಲ್ಲದ ವೇಳೆ ಚಿನ್ನ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

ರಾಮಕುಂಜ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನೆಬಿಸಾ ಅವರ ಪುತ್ರಿ ಹೆರಿಗೆ ಹಿನ್ನೆಲೆಯಲ್ಲಿ, ಪುತ್ರಿಯೊಂದಿಗೆ ನೆಬಿಸಾ ಹಾಗೂ ಅವರ ಅಳಿಯ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದರು. ಕಳೆದ ನಾಲೈದು ದಿನಗಳಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಮಾ.11ರಂದು ಸಂಜೆ ಮನೆಗೆ ಬಂದಾಗ ಮನೆಯ ಹಿಂಬದಿಯ ಬಾಗಿಲು ಮುರಿದ ಸ್ಥಿತಿಯಲ್ಲಿದ್ದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮನೆಯ ರೂಮಿನ ಕಪಾಟಿನಲ್ಲಿಟ್ಟಿದ್ದ ರೂ 1,08,000/ ನಗದು ಹಾಗೂ ಸುಮಾರು 13 ಪವನ್ ಚಿನ್ನಾಭರಣ ( ಅಂದಾಜು ರೂ 5,20,000/-ಮೌಲ್ಯ) ಗಳನ್ನು ಕಳ್ಳರು ಕಳ್ಳತನ ಮಾಡಿರುವುದು ಕಂಡು ಬಂದಿರುತ್ತದೆ. ನೆಬಿಸ ಅವರ ಪುತ್ರ ಸಿದ್ದೀಕ್ ಎಂಬವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸು ಠಾಣೆಯಲ್ಲಿ ಅ.ಕ್ರ: 35/2024, ಕಲಂ:454.457.380 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!