Wednesday, August 5, 2026
spot_imgspot_img
spot_imgspot_img

ರಾಂಚಿ: ಭದ್ರತಾ ಪಡೆಗಳ ಗುಂಡಿಗೆ 17 ಮಂದಿ ನಕ್ಸಲರು ಬಲಿ

- Advertisement -
- Advertisement -

ರಾಂಚಿ: ಜಾರ್ಖಂಡ್‌ನ ಸಾರಂಡಾ ಕಾಡಿನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಐವರು ಮಹಿಳೆಯರು ಸೇರಿದಂತೆ 17 ಮಂದಿ ನಕ್ಸಲರು ಬಲಿಯಾಗಿದ್ದಾರೆ.

ಆಪರೇಷನ್ ಮೇಘಬುರು ಹೆಸರಿನಲ್ಲಿ 209 ಕೋಬ್ರಾ, ಚೈಬಾಸಾ ಜಿಲ್ಲಾ ಪೊಲೀಸರು ಮತ್ತು ಜಾರ್ಖಂಡ್ ಜಾಗ್ವಾರ್‌ ತಂಡದಿಂದ ಜ.22 ರಂದು ಈ ಎನ್‌ಕೌಂಟರ್‌ ಆರಂಭಗೊಂಡಿದ್ದು, ಸತತ ಎರಡು ದಿನಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ ಸಿಪಿಐನ (ಮಾವೋವಾದಿ) ಉನ್ನತ ಶ್ರೇಣಿಯ ಕೇಂದ್ರ ಸಮಿತಿ ಸದಸ್ಯ, ಪತಿರಾಮ್ ಮಾಜ್ಹಿ ಅಲಿಯಾಸ್ ಅನಲ್ ಡಾ ಈ ವೇಳೆ ಸಾವನ್ನಪ್ಪಿದ್ದಾನೆ. ಈತನ ವಿರುದ್ಧ 149 ಪ್ರಕರಣಗಳಿದ್ದವು, ಅಲ್ಲದೇ ತಲೆಗೆ 1 ಕೋಟಿ ರೂ. ಯಂತೆ ಬಹುಮಾನ ಹೊಂದಿದ್ದ. ಈತನ ಜೊತೆಗೆ ಇನ್ನಿತರ 14 ಮಂದಿ ಹತ್ಯೆಯಾಗಿದ್ದರು.

ಮತ್ತೊಮ್ಮೆ ನಡೆದ ಗುಂಡಿನ ದಾಳಿಯ ನಂತರ ಎರಡು ಶವಗಳು ಪತ್ತೆಯಾಗಿರುವ ಮೂಲಕ ಸಾವಿನ ಸಂಖ್ಯೆ 17 ಕ್ಕೆ ಏರಿದ್ದು, ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ದೊಡ್ಡ ಯಶಸ್ಸು ಎಂದು ಹೇಳಿಕೊಂಡಿದ್ದಾರೆ. ಭದ್ರತಾ ಪಡೆಗಳಿಂದ ಶೋಧ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜನವರಿಯ ಆರಂಭದಲ್ಲಿ, ಬಸ್ತಾರ್ ವ್ಯಾಪ್ತಿಯ ಬಿಜಾಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ನಕ್ಸಲರು ಸಾವನ್ನಪ್ಪಿದ್ದರು. ಛತ್ತೀಸ್‌ಗಢದಲ್ಲಿ ಒಟ್ಟು 47 ಲಕ್ಷ ರೂ. ಬಹುಮಾನ ಹೊಂದಿದ್ದ 9 ಮಾವೋವಾದಿಗಳು ಶುಕ್ರವಾರ ಶರಣಾಗಿದ್ದರು.

- Advertisement -

Related news

error: Content is protected !!