Monday, April 29, 2024
spot_imgspot_img
spot_imgspot_img

ಮಂಗಳೂರು: ಉದ್ಯಮಿ, ಕೊಡುಗೈದಾನಿ ಹಾಗೂ ಸಮಾಜಸೇವಕರಾದ ಗುಬ್ಯ ಮೇಗಿನಗುತ್ತು ಶ್ರೀಧ‌ರ್ ಶೆಟ್ಟಿ ಯವರಿಗೆ “ರಂಗ ಬಂಧು” ಬಿರುದು ಪ್ರಶಸ್ತಿ

- Advertisement -G L Acharya panikkar
- Advertisement -

ಮಂಗಳೂರು: ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ “ತನಿಯಜ್ಜೆ” ಎಂಬ ತುಳು ನಾಟಕವು ಫೆಬ್ರವರಿ 22 ಗುರುವಾರ ಸಂಜೆ ಗಂಟೆ 5:30 ಕ್ಕೆ ಮಂಗಳೂರು ಪುರಭವನದಲ್ಲಿ ಸನ್ಮಾನ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದೊಂದಿಗೆ ಜರಗಿತು.

ಈ ಸಂಧರ್ಭದಲ್ಲಿ ಉದ್ಯಮಿ.. ಸಾಮಾಜಿಕ ಧಾರ್ಮಿಕ ಕಾರ್ಯಕರ್ತರು, ಕಲಾ ಪೋಷಕರು ಶ್ರೀಧ‌ರ್ ಶೆಟ್ಟಿ ಗುಬ್ಯ ಮೇಗಿನಗುತ್ತು ಅವರಿಗೆ “ರಂಗ ಬಂಧು” ಎಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಲೆಗೆ ಅಪಾರ ಗೌರವ ಕೊಡುವ ಶೆಟ್ಟಿಯವರು ಕಲಾ ಪೋಷಕರು ಕೂಡ ಹೌದು. ಪ್ರತಿವರ್ಷ ಒಡಿಯೂರು ರಥೋತ್ಸವದ ಸಂದರ್ಭದಲ್ಲಿ ಕನ್ಯಾನದಲ್ಲಿ ಯಕ್ಷಗಾನ, ನಾಟಕ ಅಥವಾ ಒಂದು ಒಳ್ಳೆಯ ಸಾಂಸ್ಕ್ರತಿಕ ಕಾರ್ಯ ಕ್ರಮವನ್ನು ಆಯೋಜಿಸುತ್ತಾರೆ. ತಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಸಹ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ನಡೆಸುತ್ತಾರೆ. ಇನ್ನೂ ಅನೇಕ ನಾಟಕದಲ್ಲಿ ಸ್ವತಃ ಅಭಿನಯಿಸಿ, ನಿರ್ದೇಶನ ಕೂಡ ಮಾಡಿರುತ್ತಾರೆ.

ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗುಬ್ಯ ಮೇಗಿನಗುತ್ತು ಶ್ರೀಧ‌ರ್ ಶೆಟ್ಟಿ ಯವರು ಅನೇಕ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರಗಳಲ್ಲಿ ಸ್ವತಃ ಪಾಲ್ಗೊಂಡು ದೇಣಿಗೆ ಕೂಡ ನೀಡಿರುತ್ತಾರೆ. ಸಮಾಜ ಸೇವೆ ಮಾಡುವುದರ ಮೂಲಕ ಯಾವುದೇ ಪ್ರಚಾರ ಬಯಸದೇ ಅನೇಕ ಬಡವರಿಗೆ ಆರ್ಥಿಕ ಸಹಾಯ ಮಾಡಿರುತ್ತಾರೆ.

ಮಂಗಳೂರು ಪುರಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ ಕಿಶೋರ್ ಡಿ ಶೆಟ್ಟಿ (ಅಧ್ಯಕ್ಷರು.. ತುಳು ನಾಟಕ ಕಲಾವಿದರ ಒಕ್ಕೂಟ.(ರಿ), ಕುಡ್ಲ) , ಡಾ। ಸಂಜೀವ ದಂಡಕೇರಿ (ಹಿರಿಯ ಪ್ರಖ್ಯಾತ ನಾಟಕ ರಚನೆಕಾರರು), ರವೀಂದ್ರ ಶೆಟ್ಟಿ ಉಳಿದೊಟ್ಟು (ದ. ಕನ್ನಡ ಜಿಲ್ಲಾ ಬಿ ಜೆ ಪಿ ಉಪಾಧ್ಯಕ್ಷರು),ರಾಘವೇಂದ್ರ ರಾವ್ (ಶರವು ಕ್ಯಾಟರರ್ಸ್. ಮಂಗಳೂರು) , ಲಕ್ಷ್ಮೀಶ ಕುಂಬಳೆ (ಕೋಸ್ಟಲ್ ಕೆಮೆರ ರೆಂಟಲ್ಸ್), ನವೀನ್ ಸಾಲ್ಯಾನ್ ಪಿತ್ರೋಡಿ (ಖ್ಯಾತ ನಾಟಕ ರಚನೆಕಾರರು ಹಾಗೂ ಕಲಾವಿದರು), ಲಯನ್. ಚರಣ್ ಆಳ್ವ ಚಿಪ್ಪಾರು ಗುತ್ತು (ಅಧ್ಯಕ್ಷರು, ಲಯನ್ಸ್ ಕ್ಲಬ್ ಅಶೋಕ ನಗರ. ಮಂಗಳೂರು), ಹರ್ಷ ಕುಮಾರ್ ರೈ ಮಾಡಾವು (ಅಧ್ಯಕ್ಷರು. ಜನ್ಮ ಫೌಂಡೇಶನ್ ಟ್ರಸ್ಟ್(ರಿ), ಜಗನ್ನಾಥ್ ಶೆಟ್ಟಿ ಬಾಳ (ಪತ್ರಕರ್ತರು.. ಸಂಚಾಲಕರು. ರಂಗಚಾವಡಿ, ಮಂಗಳೂರು) ಸುರೇಶ್‌ ಶೆಟ್ಟಿ ಜೋಡುಕಲ್ಲು ಮತ್ತು ತುಳುವೆರೆ ಉಡಲ್ ಜೋಡುಕಲ್ಲು ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!