Saturday, April 20, 2024
spot_imgspot_img
spot_imgspot_img

ಆಳ ಸಮುದ್ರದಲ್ಲಿ ಸಿಲುಕಿದ ಮೀನುಗಾರರು ರಕ್ಷಣೆ. ಕಾರ್ಯಾಚರಣೆ ನಡೆಸಿ ರಕ್ಷಿಸಿದ ಕೋಸ್ಟ್ ಗಾರ್ಡ್

- Advertisement -G L Acharya panikkar
- Advertisement -

ಭಟ್ಕಳ:- ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್  ಬಿರುಗಾಳಿಗೆ ಸಿಲುಕಿ ಇಂಜಿನ್ ಕೆಟ್ಟಿಹೋಗಿದ್ದು ಬೋಟ್ ನಲ್ಲಿದ್ದ 24 ಜನ ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಭಟ್ಕಳದ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಕಮರುಲ್ ಬಾಹರ್ ಬೋಟ್ ಭಟ್ಕಳ-ಹೊನ್ನಾವರ  ನಡುಭಾಗದ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಗೆ ಸಿಲುಕಿ ಬೋಟ್ ನ ಇಂಜಿನ್ ಕೆಟ್ಟುಹೋಗಿತ್ತು.ಈ ವೇಳೆ ಬಿರುಗಾಳಿಗೆ ಅಲೆಗಳ ಅಬ್ಬರದಿಂದ ಬೋಟ್ ಮುಳುಗುವ ಸ್ಥಿತಿಯಲ್ಲಿದ್ದು ಅದರಲ್ಲಿದ್ದ 24 ಜನ ಮೀನುಗಾರರು ಸಂಕಷ್ಟಕ್ಕೊಳಗಾಗಿದ್ದರು. ಈ ವೇಳೆ  ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಮೀನುಗಾರರನ್ನು ಹಾಗೂ ಬೋಟ್ ಅನ್ನು ರಕ್ಷಿಸಿ ಕಾರವಾರದ ಬಂದರಿಗೆ ಕರೆತಂದಿದ್ದಾರೆ.

- Advertisement -

Related news

error: Content is protected !!