Wednesday, July 15, 2026
spot_imgspot_img
spot_imgspot_img

3 ವರ್ಷದ ಮಗು ಮೇಲೆ ಅತ್ಯಾಚಾರ – ಆರೋಪಿಗೆ 1 ಲಕ್ಷ ದಂಡ, ವಸೂಲಿ ಹಣದಲ್ಲಿ ಪಾರ್ಟಿ

- Advertisement -
- Advertisement -

ರಾಂಚಿ: 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬದಲು, ಗ್ರಾಮ ಪಂಚಾಯತ್‌ 1 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೆ, ಆ ಹಣದ ಒಂದು ಭಾಗವನ್ನು ಬಳಸಿಕೊಂಡು ಕುಡಿದು ಪಾರ್ಟಿ ಮಾಡಿರುವ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ಸುನಿಲ್ ಲೋಹರಾ, ಬಾಲಕಿಯ ತಾಯಿಗೆ ಮಗುವನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಬೇರೆ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮಗು ಅಳಲು ಆರಂಭಿಸಿದ್ದಕ್ಕೆ ತಾಯಿ ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡಿದ್ದ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಪ್ರಕರಣವನ್ನು ಪೊಲೀಸರಿಗೆ ತಿಳಿಸುವ ಬದಲು ಗ್ರಾಮ ಪಂಚಾಯತ್ ಸಭೆ ನಡೆಸಲಾಗಿದೆ. ಅಲ್ಲ್‌ ಆರೋಪಿಗೆ 1 ಲಕ್ಷ ರೂ. ದಂಡ ವಿಧಿಸಿದ್ದಾರೆ. ಆರೋಪಿ ಮೊದಲ ಹಂತವಾಗಿ 20 ಸಾವಿರ ರೂ. ಪಾವತಿಸಿದ್ದ. ಉಳಿದ 80 ಸಾವಿರ ರೂ.ಗಳನ್ನು ಒಂದು ವಾರದಲ್ಲಿ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಆರೋಪಿಯಿಂದ ಪಡೆದ 20 ಸಾವಿರ ರೂ. ಹಣದಲ್ಲಿ ಪಂಚಾಯತ್ ಸದಸ್ಯರು ಮದ್ಯ ಮತ್ತು ಮಾಂಸದ ಪಾರ್ಟಿ ಮಾಡಿದ್ದಾರೆ. ಪ್ರಕರಣವನ್ನು ಗ್ರಾಮದ ಮಟ್ಟದಲ್ಲೇ ಮುಚ್ಚಿಹಾಕಲು ಯತ್ನ ನಡೆಸಲಾಗಿದೆ. ದಂಡದ ರೂಪದಲ್ಲಿ ವಸೂಲಿ ಮಾಡಲಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.

ಈ ಮಾಹಿತಿ ಪೊಲೀಸರಿಗೆ ತಲುಪುತ್ತಿದ್ದಂತೆ ಘಾಗ್ರಾ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯ ತಾಯಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲೇ ಆರೋಪಿ ಸುನಿಲ್ ಲೋಹರಾನನ್ನು ಬಂಧಿಸಿ, ಮುಂದಿನ ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!