Friday, April 19, 2024
spot_imgspot_img
spot_imgspot_img

ಬೆಳಿಗ್ಗೆ 7 ರಿಂದ ಪಡಿತರ ವಿತರಣೆ ಆರಂಭ: ಜಿಲ್ಲಾಧಿಕಾರಿ

- Advertisement -G L Acharya panikkar
- Advertisement -

ಮಂಗಳೂರು: ನ್ಯಾಯಬೆಲೆ ಅಂಗಡಿದಾರರು ಬೆಳಿಗ್ಗೆ 7 ಗಂಟೆಗೆ ಪಡಿತರ ವಿತರಣೆ ಆರಂಭಿಸಬೇಕು. ಪಡಿತರ ಚೀಟಿದಾರರು ದಟ್ಟಣೆಯಾದಲ್ಲಿ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು ಕ್ಯೂ ಸ್ಲಿಪ್ ಅಥವಾ ಟೋಕನ್ ನೀಡಿ ಪಡಿತರ ವಿತರಿಸಬೇಕು. 10 ಗಂಟೆಯ ನಂತರವೂ ಕ್ಯೂನಲ್ಲಿದ್ದ ಪಡಿತರ ಚೀಟಿದಾರರನ್ನು ಹಿಂದಕ್ಕೆ ಕಳುಹಿಸದೇ ಕಡ್ಡಾಯವಾಗಿ ಪಡಿತರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.

ಆಧಾರ್ ಒಟಿಪಿ ಸೌಲಭ್ಯವನ್ನು ಒದಗಿಸಿರುವುದರಿಂದ ಗೊಂದಲಕ್ಕೆ ಒಳಗಾಗದೆ ಪಡಿತರ ವಿತರಿಸಬೇಕು. ಪಡಿತರ ಚೀಟಿದಾರರು ಬಯೋಮೆಟ್ರಿಕ್ ಕೊಡಲು ಒತ್ತಾಯಿಸಬಾರದು. ಮೇ ತಿಂಗಳಿನ ವಿತರಣಾ ಪ್ರಮಾಣದ ಫಲಕ ಅಳವಡಿಸಬೇಕು. ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸುವಂತಿಲ್ಲ. ಬೆಳ್ತಿಗೆ ಹಾಗೂ ಕುಚ್ಚಲಕ್ಕಿಯನ್ನು ಸಮ ಪ್ರಮಾಣದಲ್ಲಿ ವಿತರಿಸಬೇಕು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪಡಿತರ ವಿತರಿಬೇಕು ಎಂದು ಸೂಚಿಸಿದ್ದಾರೆ.

driving

ಕಾನೂನು ಬಾಹಿರವಾಗಿ ಹಣ ಪಡೆಯಬಾರದು. ಪಡಿತರ ಚೀಟಿದಾರರೊಂದಿಗೆ ಸೌಹಾರ್ದಯುತ ವಾಗಿ ವರ್ತಿಸಬೇಕು. ಪಡಿತರ ವಿತರಣೆಗೆ ಜನ ದಟ್ಟಣೆಯಾಗದಂತೆ ಹಾಗೂ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಪೊಲೀಸ್‌ ಸಿಬ್ಬಂದಿ ನಿಯೋಜಿಸಿದ್ದು, ಸಮಸ್ಯೆ ಆಗದಂತೆ ರೀತಿಯಲ್ಲಿ ಪಡಿತರ ವಿತರಣೆ ಮಾಡುವಂತೆ ತಿಳಿಸಿದ್ದಾರೆ.

ಹೊರ ಜಿಲ್ಲೆಯ ಪಡಿತರ ಚೀಟಿದಾರರು ದಾಸ್ತಾನು ಇರುವ ಸಮೀಪದ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುವಂತೆ ತಿಳಿಸಿದ್ದಾರೆ.

- Advertisement -

Related news

error: Content is protected !!