Tuesday, March 2, 2021

ಭೂಗತ ಪಾತಕಿ ರವಿ ಪೂಜಾರಿ ಮಾರ್ಚ್ 9ರ ತನಕ ಮುಂಬೈ ಪೊಲೀಸರ ವಶಕ್ಕೆ

ಮುಂಬೈ: ಭೂಗತ ಪಾತಕಿ ರವಿ ಪೂಜಾರಿಯನ್ನು ಮಾರ್ಚ್ 9ರ ತನಕ ಸ್ಥಳೀಯ ನ್ಯಾಯಾಲಯ ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಿದೆ. ಬೆಂಗಳೂರಿನಿಂದ ಕರೆ ತರಲಾದ ರವಿ ಪೂಜಾರಿಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

2016ರಲ್ಲಿ ಮುಂಬೈಯಲ್ಲಿ ನಡೆದ ಘಜಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಪೂಜಾರಿ ವಿಚಾರಣೆ ನಡೆಯಲಿದೆ. ಮುಂಬೈ ಮಹಾನಗರದಲ್ಲಿ ನಡೆದ 49 ಕ್ರಿಮಿನಲ್ ಪ್ರಕರಣಗಳಲ್ಲಿ ರವಿ ಪೂಜಾರಿ ಆರೋಪಿಯಾಗಿದ್ದಾನೆ. 2020 ಫೆಬ್ರವರಿ 22 ರಂದು ರವಿ ಪೂಜಾರಿಯನ್ನು ಸೆನಗಲ್ ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.

- Advertisement -

MOST POPULAR

HOT NEWS

Related news

error: Content is protected !!