ಸೋಮೇಶ್ವರ:-ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಮಹಾಮಾರಿ ಕೊರೊನ ಸೋಂಕು ಧೃಢಪಟ್ಟಿದ್ದು,ಮುಖ್ಯಮಂತ್ರಿಗಳು ಅತೀ ಶೀಘ್ರನೆ ಗುಣಮುಖರಾಗಲೆಂದು ಬಿಎಸ್ ವೈ ಆಪ್ತರು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಕುಟುಂಬ ಸಮೇತರಾಗಿ ಮಂಗಳೂರಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ನಮ್ಮ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಿಗೆ ಕೊರೋನಾ ತಗಲಿರುವ ವಿಷಯ ತಿಳಿದು ಆಘಾತವಾಯಿತು… ದಿನವಿಡೀ ರಾಜ್ಯದ ಜನರ ಆರೋಗ್ಯಕ್ಕಾಗಿ, ಅಭಿವೃದ್ಧಿ ಕೆಲಸಗಳ ಕಡೆ ಗಮನ ನೀಡಿ ತನ್ನ ಸಚಿವ ಸಂಪುಟದ ಮಂತ್ರಿಗಳೊಂದಿಗೆ, ಸರಕಾರದ ಅಧಿಕಾರಿಗಳೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಿಕೊಂಡು,ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಕೊರೋನಾ ದ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಜ್ಯದ ಜನತೆಗೆ ದಕ್ಷ ಆಡಳಿತವನ್ನು ನೀಡಲು ಹಗಲಿರುಳು ಚಿಂತನೆ ನಡೆಸುತ್ತಿರುವ ನಮ್ಮ ಮುಖ್ಯ ಮಂತ್ರಿ ಮಾನ್ಯ ಬಿ ಎಸ್ ಯಡಿಯೂರಪ್ಪರವರು ಶೀಘ್ರದಲ್ಲಿ ಕೊರೋನಾ ದಿಂದ ಗುಣಮುಖರಾಗಿ ಜನ ಸೇವೆಯಲ್ಲಿ ಜನ ಸೇವೆಯಲ್ಲಿ ತೊಡಗುವಂತಾಗಲಿ ಎಂದು ಸೋಮನಾಥೇಶ್ವರ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ನಾವು ನಂಬುವ ಇತರ ದೈವ ದೇವರು ಮಾನ್ಯ ಮುಖ್ಯ ಮಂತ್ರಿ ಗಳು ಶೀಘ್ರದಲ್ಲಿ ಗುಣಮುಖರಾಗಿ ಎಂದಿನಂತೆ ತನ್ನ ನಾಡಿನ ಜನರ ಸೇವೆಯಲ್ಲಿ ತೊಡಗುವಂತೆ ಅನುಗ್ರಹಿಸಲಿ ಎಂದು ಬಿಜೆಪಿ ಮುಖಂಡರು, ಸಮಾಜ ಸೇವಕರೂ ಆದ ರವೀಂದ್ರ ಶೆಟ್ಟಿ ಉಳಿದೊಟ್ಟು ಕುಟುಂಬ ಸಮೇತರಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು .
