Tuesday, June 16, 2026
spot_imgspot_img
spot_imgspot_img

ಹಜ್ ಯಾತ್ರೆ ತೆರಳಿದ್ದ ಕರ್ನಾಟಕ ಮೂಲದ ಮೂವರು ರಸ್ತೆ ಅಪಘಾತದಲ್ಲಿ ಮೃತ್ಯು, ಇಬ್ಬರು ಗಂಭೀರ

- Advertisement -
- Advertisement -

ಹಜ್ ಯಾತ್ರೆಗೆ ತೆರಳಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕ ಮೂಲದ (ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ) ಮೂವರು ಮೃತಪಟ್ಟು ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತರನ್ನು ಮುಂಡಗೋಡ ಪಟ್ಟಣದ ರೋಣ ಮೆಡಿಕಲ್ ಮಾಲೀಕರಾದ ಫಯಾಜ್ ರೋಣ, ಪತ್ನಿ ಆಪ್ರೀನಾ ಬಾನು, ಅಣ್ಣನ ಮಗ ಆಯಾನ್ ರೋಣ ಸ್ಥಳದಲ್ಲಿಯೇ ಸಾವನ್ನಪ್ಪಿದರೆ. ಫಯಾಜ್ ರೋಣರವರ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.

ಫಯಾಜ್ ರೋಣ ಕುಟಂಬದವರು ಕಳೆದ ಮಾ.26 ರಂದು ಶುಕ್ರವಾರ ರಾತ್ರಿ ಮಕ್ಕಾ ಮದಿನಾ ದರ್ಶನಕ್ಕೆ ತೆರಳಿದ್ದರು. ಏ.6ರ ರಾತ್ರಿ ಮಕ್ಕಾ ಮದಿನಾ ಹತ್ತಿರ ಸಂಭವಿಸಿದ ರಸ್ತೆ ಅಪಾಘಾತದಲ್ಲಿ ಮೂರು ಜನ ಮೃತಪಟ್ಟರೆ ಇಬ್ಬರು ಗಂಭೀರ ಗಾಯಗೊಂಡಿರುವುದಾಗಿ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!