Sunday, June 29, 2025
spot_imgspot_img
spot_imgspot_img

ಚಕ್ರಬಡ್ಡಿ ನ.5ರೊಳಗೆ ಸಾಲಗಾರರ ಖಾತೆಗೆ ಜಮಾ- ಆರ್. ಬಿ.ಐ ನಿರ್ದೇಶನ.

- Advertisement -
- Advertisement -

ನವದೆಹಲಿ: ಇಎಂಐ ವಿನಾಯಿತಿ ಅವಧಿಯಲ್ಲಿ ಎರಡು ಕೋಟಿ ರೂಪಾಯಿವರೆಗಿನ ಸಾಲದ ಮೇಲೆ ಸಂಗ್ರಹಿಸಿದ ಚಕ್ರಬಡ್ಡಿಯನ್ನು ನ.5ರೊಳಗೆ ಸಾಲಗಾರರ ಖಾತೆಗೆ ಜಮಾ ಮಾಡುವಂತೆ ಬ್ಬ್ಯಾಂಕ್, ಹಣಕಾಸು ಸಂಸ್ಥೆಗಳಿಗೆ ಆರ್’ಬಿಐ ಸೂಚಿಸಿದೆ.


ಎರಡು ಕೋಟಿ ರೂ.ವರೆಗಿನ ವಸೂಲಿ ಮಾಡಿದ ಬಡ್ಡಿ ಮೇಲಿನ ಬಡ್ಡಿಯನ್ನು ನವೆಂಬರ್ 5ರೊಳಗೆ ಖಾತೆಗಳಿಗೆ ಜಮೆ ಮಾಡುವುದಾಗಿ ಈ ಹಿಂದೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್’ಗೆ ತಿಳಿಸಿತ್ತು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸುಪ್ರೀಂ ಕೋರ್ಟ್’ಗೆ ಅಫಿಡವಿಟ್ ಸಲ್ಲಿಸಿತ್ತು. ಆರು ತಿಂಗಳು ಮೀರಿದ ಸಾಲ ವಿನಾಯಿತಿಯಿಂದ ಒಟ್ಟಾರೆ ಸಾಲದ ಶಿಸ್ತಿನ ಚೈತನ್ಯ ಕಳೆದುಕೊಳ್ಳುತ್ತದೆ ಎಂದು ಹೇಳಿತ್ತು.

ಅಕ್ಟೋಬರ್ ಐದನೇ ತಾರೀಕಿನಂದು ಸುಪ್ರೀಂ ಕೋರ್ಟ್ ಆದೇಶದ ಬಳಿಕ ಈ ಅಫಿಡವಿಟ್ ದಾಖಲಿಸಲಾಗಿತ್ತು.
ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾಲ ಮರುಹೊಂದಾಣಿಕೆ ಬಗ್ಗೆ ಕೆ.ವಿ. ಕಾಮತ್ ಸಮಿತಿ ಶಿಫಾರಸು ಪ್ರಕಾರ ಕ್ರಮ ಕೈಗೊಳ್ಳಲಾಗಿತ್ತು. ಕೊರೋನಾ ಲಾಕ್ ಡೌನ್’ನಿಂದಾಗಿ ಮಾರ್ಚ್ 1ರಿಂದ ಆಗಸ್ಟ್ 31ರವರೆಗೆ ಸಾಲ ಇಎಂಐ ವಿನಾಯಿತಿ ಘೋಷಿಸಲಾಗಿತ್ತು.

- Advertisement -

Related news

error: Content is protected !!