- Advertisement -
- Advertisement -


ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನನಿತ್ಯ ಅನ್ನಸಂತರ್ಪಣೆ ವಿನಿಯೋಗಕ್ಕೆ 2025-26ನೇ ಸಾಲಿನಲ್ಲಿ ಆದೇಶದ ದಿನಾಂಕ 1ವರ್ಷದ ಅವಧಿಗೆ “ಬಾಳೆಎಲೆ” ಸರಬರಾಜು ಮಾಡಲು ಇ-ಟೆಂಡರ್ ಪದ್ದತಿಯ ಮೂಲಕ ಟೆಂಡರ್‌ಗಳನ್ನು https://kppp.karnataka.gov.in website ನಲ್ಲಿ ಆಹ್ವಾನಿಸಲಾಗಿದೆ.
ಸಾಮಾಗ್ರಿಗಳ ವಿವರ: ಬಾಳೆಎಲೆ- ( ಪೂರ್ಣ ಇಡಿ ಬಾಳೆಎಲೆ- ಕನಿಷ್ಟ 3 ರಿಂದ 4 ಅಡಿ ಉದ್ದ ಇರತಕ್ಕದ್ದು)
ಶರ್ತಗಳು:
- ಇ.ಎಂ.ಡಿ ಮೊತ್ತವನ್ನು ಇ-ಪೇಮೆಂಟ್ ಮೂಲಕ ಇ-ಪೋರ್ಟಲ್ ಮುಖಾಂತರ ಸಲ್ಲಿಸುವುದು. ನಿಗದಿಪಡಿಸಿದ ಇ.ಎಂ.ಡಿ ಯೊಂದಿಗೆ ಸಲ್ಲಿಸದಿರುವ ಟೆಂಡರ್‌ನ್ನು ಪರಿಗಣಿಸುವುದಿಲ್ಲ.
- ಬಾಳೆಎಲೆ ವಿವರ, ಸರಬರಾಜು ಮತ್ತು ಷರತ್ತುಗಳನ್ನು ಕಛೇರಿ ಸಮಯದಲ್ಲಿ ಸಂಬಂಧಪಟ್ಟ ವಿಭಾಗದಿಂದ ಪಡೆಯಬಹುದು.
- ಟೆಂಡರಿನಲ್ಲಿ ಭಾಗವಹಿಸುವ ಟೆಂಡರುದಾರರು ಪೂರ್ಣ ಬಾಳೆಎಲೆಯ ಒಂದರ (01) ದರ ಸೂಚಿಸುವುದು.
- ಟೆಂಡರ್ ಸಲ್ಲಿಸುವಾಗ ಅಂಗಡಿ ಪರವಾನಿಗೆ ಪತ್ರದ ಪ್ರತಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಪಾನ್ ಕಾರ್ಡ್ ಪ್ರತಿ ಲಗ್ತೀಕರಿಸಿರಬೇಕು. ಪ್ರತೀ ಬಿಲ್ಲಿನಲ್ಲಿ ಸರಕಾರಕ್ಕೆ ನಿಯಮಾನುಸಾರ ಸಲ್ಲತಕ್ಕ ಆದಾಯ ತೆರಿಗೆ (TDS) ಕಡಿತಗೊಳಿಸಿ ಬಿಲ್ಲು ಪಾವತಿ ಮಾಡಲಾಗುವುದು. ಸರಕಾರಕ್ಕೆ ಸಲ್ಲತಕ್ಕ ಯಾವುದೆ ತೆರಿಗೆಗಳು ಸೂಚಿಸುವ ಟೆಂಡರ್ ದರದಲ್ಲಿ ಸೇರಿರತಕ್ಕದ್ದು.
- 2023-24 ನೇ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಿದ ಬಗ್ಗೆ ಸಂಬಂಧಿಸಿದ ದಾಖಲಾತಿ ಪ್ರತಿಯನ್ನು ಟೆಂಡರ್‌ನೊಂದಿಗೆ ಸಲ್ಲಿಸುವುದು.
- ಶ್ರೀ ದೇವಳದಿಂದ ತಿಂಗಳಿಗೆ ಮೂರು (3) ಅಥವಾ ನಾಲ್ಕು (4) ಬಾರಿ ಅಗತ್ಯಕ್ಕೆ ಬೇಕಾದ ಬಾಳೆಎಲೆ ಪ್ರಮಾಣದ ಬಗ್ಗೆ ಇಂಡೆಂಟ್ ನೀಡಲಾಗುವುದು. ಇಂಡೆಂಟ್‌ನಲ್ಲಿ ತಿಳಿಸಿದಷ್ಟು ಪ್ರಮಾಣದಲ್ಲಿ ಬಾಳೆಎಲೆಗಳನ್ನು ಕಡ್ಡಾಯವಾಗಿ ದೇವಳಕ್ಕೆ ನೀಡಲು ಟೆಂಡರ್‌ದಾರರು ಬದ್ಧರಿರಬೇಕು.
- ಬೇಡಿಕೆ ಪಟ್ಟಿಯಲ್ಲಿ ತಿಳಿಸಿದ ಪ್ರಮಾಣದ ಯಾ ಟೆಂಡರ್‌ನಲ್ಲಿ ತಿಳಿಸಿದ ಅಳತೆಯ ಪೂರ್ಣ ಬಾಳೆಎಲೆ ಸರಿಯಾಗಿ ಇರಬೇಕು. ಅಳತೆ ಅಥವಾ ಸಂಖ್ಯೆಯಲ್ಲಿ ಕಡಿಮೆ ಬಂದಲ್ಲಿ ಬಿಲ್ಲನ್ನು ಕಡಿತಗೊಳಿಸಲಾಗುವುದು ಹಾಗೂ ಟೆಂಡರನ್ನು ರದ್ದುಪಡಿಸಲಾಗುವುದು ಮತ್ತು ಇ.ಎಂ.ಡಿ ಹಣವನ್ನು ಮುಟ್ಟುಗೋಲು ಹಾಕಲಾಗುವುದು.
- ಶ್ರೀ ದೇವಳದ ಆಡಳಿತವು ಅನಿವಾರ್ಯ ಸಂದರ್ಭದಲ್ಲಿ ಟೆಂಡರ್ ಅವಧಿಯನ್ನು ಮುಂದುವರಿಸಲು ಸೂಚಿಸಿದಲ್ಲಿ ಚಾಲ್ತಿಯಲ್ಲಿರುವ ಟೆಂಡರ್ ದರ ಹಾಗೂ ಷರತ್ತುಗಳ ಪ್ರಕಾರ ಬಾಳೆಎಲೆ ಸರಬರಾಜು ಮಾಡಲು ಟೆಂಡರುದಾರರು ಬದ್ಧರಾಗಿರತಕ್ಕದ್ದು.
- ಈ ಹಿಂದೆ ಟೆಂಡರಿನಲ್ಲಿ ಸರಬರಾಜು ಆದೇಶ ಪಡೆದು ಕ್ಲಪ್ತ ಸಮಯಕ್ಕೆ ಬಾಳೆಎಲೆಗಳನ್ನು ಸರಬರಾಜು ಮಾಡಲು ವಿಫಲರಾದವರಿಗೆ, ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಈ ವಿಚಾರದಲ್ಲಿ ಕಾರ್ಯನಿರ್ವಹಣಾಧಿಕಾರಿಯವರ ತೀರ್ಮಾನವೇ ಅಂತಿಮವಾಗಿರುತ್ತದೆ.
- ಹಿಂದೂಯೇತರರು ಈ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಇನ್ನಿತರ ವಿವರಗಳು:-
- ಇ.ಎಂ.ಡಿ ಮೊತ್ತ ರೂ.1,00,000.00
- ಟೆಂಡರು ಸಲ್ಲಿಸುವ ಕೊನೆಯ ದಿನಾಂಕ 15-04-2025 ರ ಸಾಯಂಕಾಲ 4.00 ಗಂಟೆಯವರೆಗೆ
- ಟೆಂಡರು ತೆರೆಯುವ ದಿನಾಂಕ 17-04-2025 ರಂದು ಪೂರ್ವಾಹ್ನ ಗಂಟೆ 11.00 ಕ್ಕೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
080-25501227
25501216
- Advertisement -