Monday, July 1, 2024
spot_imgspot_img
spot_imgspot_img

ರೇಣುಕಾಸ್ವಾಮಿ ಹತ್ಯೆ ಪ್ರಕರಣ..! ಮೆಸೇಜ್‌ ಬಗ್ಗೆ ಸಾಕ್ಷ್ಯ ಸಂಗ್ರಹ.. ಇನ್​ಸ್ಟಾಗ್ರಾಮ್​ ಸಂಸ್ಥೆಗೆ ಪೊಲೀಸರ ಪತ್ರ

- Advertisement -G L Acharya panikkar
- Advertisement -

ನಟ ದರ್ಶನ್‌ ಗ್ಯಾಂಗ್​ನಿಂದ ಹತ್ಯೆಯಾದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಈಗ ರೇಣುಕಾಸ್ವಾಮಿ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಇದಕ್ಕಾಗಿ ಪೊಲೀಸರು ನೇರವಾಗಿ ಇನ್​ಸ್ಟಾಗ್ರಾಮ್​ ಸಂಸ್ಥೆಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಸಾವನ್ನಪ್ಪಿದ ರೇಣುಕಾಸ್ವಾಮಿ ಬಗೆಗೆ ಅಚ್ಚರಿ ವಿಚಾರಗಳು ಹೊರಬರ್ತಿವೆ.

​ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ 200 ಮೆಸೇಜ್ ಕಳುಹಿಸಿದ್ದ ಎನ್ನುವುದು ತಿಳಿದುಬಂದಿದೆ. ಅದು ಕೂಡ ಇನ್​​ಸ್ಟಾಗ್ರಾಮ್​​ನಲ್ಲಿ ಅಶ್ಲೀಲ ಮೆಸೇಜ್ ಮಾಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆತನ ಕಾಟ ಅತಿಯಾದಾಗ ಈ ವಿಚಾರವನ್ನು ಪವಿತ್ರಾ ಪವನ್​​ಗೆ ತಿಳಿಸಿದ್ದಳು. ಈ ಎಲ್ಲಾ ವಿಚಾರಗಳನ್ನು ಪವಿತ್ರಾ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

ಇನ್ನು ರೇಣುಕಾಸ್ವಾಮಿ ಕಳಿಸಿದ ಮೆಸೇಜ್​​​ಗಳ​​ ಮಾಹಿತಿ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಇನ್​ಸ್ಟಾಗ್ರಾಮ್ ಸಂಸ್ಥೆಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ.
ತನ್ನ ಇನ್​ಸ್ಟಾಗ್ರಾಮ್ ಐಡಿಯಿಂದ‌ ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದ, ಆತ ಮಾಡಿರುವ ಚಾಟ್ ಡೇಟಾವನ್ನ ರಿಟ್ರೀವ್ ಮಾಡಬೇಕಿದೆ. ಹೀಗಾಗಿ ರೇಣುಕಾಸ್ವಾಮಿ ಬಳಸುತ್ತಿದ್ದ ಇನ್​ಸ್ಟಾಗ್ರಾಮ್ ಸಂದೇಶದ ಬಗ್ಗೆ ಮಾಹಿತಿ ಕೊಡಲು ಪೊಲೀಸರು ಮನವಿ ಮಾಡಲಿದ್ದಾರೆ. ಯಾರಿಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ಆತನ ಇನ್​ಸ್ಟಾಗ್ರಾಂ ಖಾತೆಯಿಂದ ಸೆಂಡ್ ಆಗಿರುವ ಎಲ್ಲಾ ಮೆಸೇಜ್​ಗಳ ಮಾಹಿತಿ ಬೇಕು ಅಂತ ಕೇಳಲಿದ್ದಾರೆ. ಹಾಗಾಗಿ ಆತನ ಖಾತೆಯ ಸಂಪೂರ್ಣ ಮಾಹಿತಿಯನ್ನ ಪೊಲೀಸರು ಕೇಳಿದ್ದಾರೆ. ಇದರ ಜೊತೆಗೆ ಇನ್ನೂ ಬೇರೆ ಯಾರಿಗಾದರೂಮೆಸೇಜ್ ಮಾಡಿದ್ನಾ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.

ಇನ್ನು ರೇಣುಕಾಸ್ವಾಮಿ ಮೊಬೈಲ್​ನಿಂದ ಮೆಸೇಜ್​ಗಳ ಮಾಹಿತಿ ಪಡೆಯೋಣ ಎಂದರೂ ಆತನ ಮೊಬೈಲ್​ನ್ನು ಆರೋಪಿಗಳು ​​ ನಾಶ ಮಾಡಿದ್ದಾರೆ. ಹೀಗಾಗಿ ಇನ್​​ಸ್ಟಾಗ್ರಾಂ ಚಾಟ್ ಡೇಟಾವನ್ನು ರಿಟ್ರೀವ್ ಮಾಡಲು ಸಿದ್ಧತೆ ನಡೆಸಿದ್ದು ಇದಕ್ಕಾಗಿ ಇನ್​ಸ್ಟಾಗ್ರಾಂ ಸಂಸ್ಥೆಗೆ ಮನವಿ ಮಾಡಲಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!