- Advertisement -
- Advertisement -








ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 50 ಮೂಲ ಅಂಶಗಳಷ್ಟು ಕಡಿತಗೊಳಿಸಿದ ಬೆನ್ನಲ್ಲೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿಯನ್ನು ಇಳಿಸುವ ಪ್ರಕ್ರಿಯೆ ಆರಂಭಿಸಿವೆ. ಆದರೆ ಬ್ಯಾಂಕ್‌ಗಳು ಈಗಾಗಲೇ ಸ್ಪರ್ಧಾತ್ಮಕವಾಗಿರುವ ಗೃಹಸಾಲಗಳನ್ನು ತಿರುಚುವ ಕಾರಣದಿಂದ ಈ ಬದಲಾವಣೆಯ ಪ್ರಯೋಜನ ಹೊಸ ಸಾಲಗಾರರ ಬದಲಾಗಿ ಹಳೆ ಸಾಲಗಾರರಿಗೆ ಹೆಚ್ಚು ಲಭ್ಯವಾಗಲಿದೆ.
ಬ್ಯಾಂಕ್ ಆಫ್ ಬರೋಡಾ ರಿಪೋ ಸಂಬಂಧಿತ ಸಾಲ ದರ (ಆರ್‌ಎಲ್‌ಎಲ್‌ಆರ್)ವನ್ನು ಜೂನ್ 7ರಿಂದ ಜಾರಿಗೆ ಬರುವಂತೆ 50 ಮೂಲ ಅಂಶಗಳಷ್ಟು ಇಳಿಸಿದೆ. ಬ್ಯಾಂಕಿನ ಆರ್‌ಎಲ್‌ಎಲ್‌ಆರ್ ದರ ಇದೀಗ ಶೇಕಡ 8.15ರಷ್ಟಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಆರ್‌ಎಲ್‌ಎಲ್‌ಆರ್ ದರ 50 ಮೂಲ ಅಂಶಗಳಷ್ಟು ಇಳಿದಿದ್ದು, ಶೇಕಡ 8.35ರಷ್ಟಾಗಲಿದೆ. ಆದರೆ ಎಂಸಿಎಲ್‌ಆರ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬ್ಯಾಂಕ್ ಆಫ್ ಇಂಡಿಯಾ ಕೂಡಾ ರೆಪೊ ಸಂಬಂಧಿತ ಸಾಲದ ದರವನ್ನು 50 ಮೂಲ ಅಂಶಗಳಷ್ಟು ಇಳಿಸಿದ್ದು, ಜೂನ್ 6ರಿಂದ ಜಾರಿಗೆ ಬಂದಂತೆ ಈ ದರ ಶೇಕಡ 8.35 ಆಗಲಿದೆ.
- Advertisement -