Saturday, June 28, 2025
spot_imgspot_img
spot_imgspot_img

ಮಂಗಳೂರು : ನಿವೃತ್ತ ಕರ್ನಲ್ ರತ್ನ ಕುಮಾರ್ ಅಡಪ ನಿಧನ

- Advertisement -
- Advertisement -

ಮಂಗಳೂರು :ಬೆಂಗಳೂರಿನ ಪ್ಯಾರಾ ರೆಜಿಮೆಂಟ್ ನ ನಿವೃತ್ತ ಕರ್ನಲ್ ರತ್ನ ಕುಮಾರ್ ಅಡಪರವರು (61) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ನಿಧನರಾಗಿದ್ದಾರೆ.

35 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕರ್ನಲ್ ಅಡಪ ಅವರು 2021 ರಲ್ಲಿ ನಿವೃತ್ತರಾದರು. ಅವರು ಪತ್ನಿ ಶಾಂತಲಾ ಅಡಪ ಮತ್ತು ಅವರ ಪುತ್ರ ಮೋಹಿತ್ ಶರಣ್ ಅಡಪ ಅವರನ್ನು ಅಗಲಿದ್ದಾರೆ. ಅಂತಿಮ ವಿಧಿವಿಧಾನಗಳು ಅಕ್ಟೋಬರ್ 13 ರಂದು ಬೆಳಿಗ್ಗೆ 10 ಗಂಟೆಗೆ ಪಡವು ಮೇಗಿನ ಮನೆಯಲ್ಲಿರುವ ಅವರ ನಿವಾಸ “ಅರ್ಪಣ” ದಲ್ಲಿ ನಡೆಯಲಿದೆ. ವಿಧಿ ವಿಧಾನಗಳ ನಂತರ ಶಕ್ತಿನಗರದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!