Thursday, March 28, 2024
spot_imgspot_img
spot_imgspot_img

ಖಾಸಗಿ ರೆಸಾರ್ಟ್ ನಲ್ಲಿ ಮಧ್ಯರಾತ್ರಿ ರೇವ್​ಪಾರ್ಟಿ; ಪೊಲೀಸರಿಂದ ದಾಳಿ, ಡ್ರಗ್ಸ್ ನಶೆಯಲ್ಲಿದ್ದ ಯುವಕ, ಯುವತಿಯರು ವಶಕ್ಕೆ

- Advertisement -G L Acharya panikkar
- Advertisement -

ಬೆಂಗಳೂರು: ಅನೇಕಲ್ ಹೊರವಲಯದಲ್ಲಿ ಮಧ್ಯರಾತ್ರಿ ರೇವ್ ಪಾರ್ಟಿ ನಡೆದಿದ್ದು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ,‌ ಮರಿಜುವಾನ ಸೇರಿದಂತೆ ವಿವಿಧ ಡ್ರಗ್ಸ್​ ಪತ್ತೆಯಾಗಿವೆ ಎನ್ನಲಾಗಿದೆ. ಅರ್ಧಂಬಂರ್ಧ ಬಟ್ಟೆ ಹಾಕಿದ್ದ ಯುವತಿಯರು, ವಿದ್ಯಾರ್ಥಿಗಳು ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದರು ಎನ್ನಲಾಗಿದೆ.

ಆನೇಕಲ್ ಹೊರವಲಯದಲ್ಲಿ ಖಾಸಗಿ ರೆಸಾರ್ಟ್ ಒಂದರ ನಿರ್ಜನ ಪ್ರದೇಶದಲ್ಲಿ ಈ ರೇವ್ ಪಾರ್ಟಿ ನಡೆದಿದೆ. ಖಚಿತ ಮಾಹಿತಿ ‌ಮೇರೆಗೆ ಆನೇಕಲ್ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ಎಂಟ್ರಿ ಕೊಡುತ್ತಿದ್ದ ಹಾಗೆ ಎದ್ನೋ ಬಿದ್ನೋ ಅಂತ ಯುವಕ ಯುವತಿಯರು ಓಡಿಹೋಗಿದ್ದಾರೆ. ಡ್ರಗ್ಸ್ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಈ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

- Advertisement -

Related news

error: Content is protected !!