Thursday, August 6, 2026
spot_imgspot_img
spot_imgspot_img

ಪರಿಷ್ಕೃತ ಹಾಲಿನ ದರ ನಾಳೆಯಿಂದ ಜಾರಿ

- Advertisement -
- Advertisement -

ಹಾಲು ಒಕ್ಕೂಟಗಳ ಮನವಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿದ್ದ ತೀರ್ಮಾನದಂತೆ ನಾಳೆಯಿಂದಲೇ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪ್ರತಿ ಲೀಟರ್‌ 4 ರೂ. ಹೆಚ್ಚಳ ಆಗಲಿದೆ.ಈ ಹಿಂದೆ 2023ರ ಆಗಸ್ಟ್‌ 3 ಹಾಗೂ 2024ರ ಜೂನ್‌ 2ರಲ್ಲಿ ಹಾಗೂ 2025 ಮಾರ್ಚ್‌ನಲ್ಲಿ ಏರಿಕೆ ಮಾಡಲಾಗಿತ್ತು. ಈಗ ಮತ್ತೆ 4 ರೂ. ಏರಿಕೆ ಮಾಡಲಾಗಿದೆ. ಈ ಮೂಲಕ ರೈತರಿಗೆ ಲಾಭ ಕೊಟ್ಟರೂ ಗ್ರಾಹಕರ ಮೇಲೆ ಹೊಡೆತ ಬಿದ್ದಿದೆ.

ನೂತನ ಪರಿಷ್ಕೃತ ದರವು ಮಂಗಳವಾರ ಜಾರಿಯಾಗಲಿದ್ದು, ಜನ ಸಾಮಾನ್ಯರಿಗೆ ಹಾಲಿನ ದರ ಏರಿಕೆಯ ಬರೆ ಬೀಳಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ.ಬಸ್‌‍, ಮೆಟ್ರೋ, ವಿದ್ಯುತ್‌ ಬಳಿಕ ಕೆಎಂಎಫ್‌ ನಂದಿನಿ ಹಾಲಿನ ದರ ಏರಿಕೆ ದೊಡ್ಡ ಹೊರೆಯಾಗಿದೆ.

- Advertisement -

Related news

error: Content is protected !!