ಬೆಂಗಳೂರು: ಜೀ ಕನ್ನಡ ಡ್ರಾಮಾ ಜೂನಿಯರ್ ಸೀಸನ್5 ವಿನ್ನರ್ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರಮತ್ತು ವಿಷ್ಣು ಜಂಟಿಯಾಗಿ ಟ್ರೋಫಿ ಗೆದ್ದಿದ್ದಾರೆ.
ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಶಾಸ್ತ್ರೀಯ ಮತ್ತು ಕಾಮಿಡಿ ವಿಭಾಗದಲ್ಲಿ ವಾಕ್ಪಟುತ್ವ ಮತ್ತು ಭಾವಾಭಿನಯದ ಮೂಲಕ ತೀರ್ಪುಗಾರರ ಮತ್ತು ಕನ್ನಡಿಗರ ಮೆಚ್ಚುಗೆ ಗಳಿಸಿ ಸೀಸನ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳೊಂದಿಗೆ ರಿಷಿಕಾ ಫೈನಲ್‌ಗೆ ಲಗ್ಗೆ ಹಾಕಿದ್ದರು.
ರಿಷಿಕಾ ಅವರುವಿಶ್ವವಾಣಿ ಮಂಗಳೂರು ವರದಿಗಾರ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ.
ವಿಷ್ಣು ಕುಣಿಗಲ್ಅ ವರು ವೆಂಕಟೇಶ್, ರಾಜೇಶ್ವರಿ ದಂಪತಿ ಪುತ್ರ. ರನ್ನರ್ ಅಪ್ ಮಹಾಲಕ್ಷ್ಮಿ, ಸೆಕೆಂಡ್ ರನ್ನರ್ ಅಪ್ ಇಂಚರ ಟ್ರೋಫಿ ಗೆದ್ದುಕೊಂಡಿದ್ದಾರೆ.
ಬಹುಮುಖ ಪ್ರತಿಭೆ ಮಂಗಳೂರಿನ ರಿಷಿಕಾ ಅಲ್ಲಮಪ್ರಭು ನಾಟಕದಲ್ಲಿ ಭಕ್ತಿ ಭಾವನಾತ್ಮಕ ವಚನ ಹೇಳುತ್ತಾ ಭಕ್ತಿಯ ಪರಾಕಾಷ್ಠೆ ತೋರಿದ್ದರು.
ತೀರ್ಪುಗಾರರಾದ ರವಿಚಂದ್ರನ್, ಲಕ್ಷ್ಮೀ, ರಚಿತಾರಾಮ್ , ರಂಗ ಮೇಷ್ಟ್ರು ಅರುಣ್ ಸಾಗರ್, ರಾಜು ತಾಳಿಕೋಟೆ ಅವರು ವಿಶೇಷವಾಗಿ ಮೆಚ್ಚಿಕೊಂಡಿದ್ದರು.
ಸ್ಪಷ್ಟತೆ ಗೆ ಇನ್ನೊಂದು ಹೆಸರೇ ರಿಷಿಕಾ. ರಿಷಿಕಾ ಸ್ಟೇಜ್ ಮೇಲೆ ಬಂದರೆ, ಅದ್ಭುತ ಪರ್ಫಾರ್ಮೆನ್ಸ್ ಖಂಡಿತಾ ಇರುತ್ತೆ, ತಪ್ಪು ಹುಡುಕಿದ್ರೂ ಸಿಗಲ್ಲ- ರವಿಚಂದ್ರನ್ ನಟ, ಜಡ್ಜ್ ಎಂದು ಹಾಡಿ ಕೊಂಡಾಡಿದ್ದಾರೆ.
ರಿಷಿಕಾನ ನಂಬಿ ಯಾವ ಪಾತ್ರ ಕೂಡಾ ಕೊಡಬಹುದು. ಇಂಥ ಅದ್ಭುತ ಪ್ರತಿಭೆಯನ್ನು ಮಗಳಾಗಿ ಪಡೆದವರು ಅದೃಷ್ಟವಂತರು ಎಂದು ನಟಿ ಲಕ್ಷ್ಮಿಯವರು ಹೊಗಳಿದ್ದಾರೆ ..
ಧ್ವನಿ ಮತ್ತು ಭಾವ ಭಂಗಿಯಲ್ಲಿ ರಿಷಿಕಾಗೆ ಸಾಟಿ ಬೇರೊಬ್ಬರಿಲ್ಲ. ಹುಡುಗಿ ಅಂಥ ನಂಬೋಕೆ ಆಗೊಲ್ಲ, ಆ ರೀತಿ ಪುರುಷ ಪಾತ್ರಗಳನ್ನು ಮಾಡುತ್ತಾಳೆ ಎಂದು ರಚಿತಾರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ವಿಷ್ಣು ಕುಣಿಗಲ್ ಕಾಮಿಡಿ ಸ್ಕಿಟ್ ಗಳಿಂದ ತೀರ್ಪುಗಾರರ ಮೆಚ್ಚುಗೆ ಜತೆಗೆ ಅಭಿಮಾನಿ ವರ್ಗ ಹೊಂದಿದ್ದರು ಎಂದು ತೀರ್ಪುಗಾರರು ಹೇಳಿದ್ದಾರೆ