Tuesday, November 28, 2023
spot_imgspot_img
spot_imgspot_img

ಮಣಿಪಾಲ: ಸ್ಕೂಟಿ ಹಾಗೂ ಬೈಕ್‌ಗಳ ನಡುವೆ ಢಿಕ್ಕಿ; ವಿದ್ಯಾರ್ಥಿನಿ ಮೃತ್ಯು

- Advertisement -G L Acharya panikkar
- Advertisement -

ಮಣಿಪಾಲ: ಸ್ಕೂಟಿ ಹಾಗೂ ಬೈಕ್‌ಗಳ ನಡುವೆ ಢಿಕ್ಕಿ ಸಂಭವಿಸಿ ಬೈಕ್‌ನ ಹಿಂಬದಿಯಲ್ಲಿದ್ದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ನಡೆದಿದೆ. ಹಿರಿಯಡಕದ ಸುಶ್ಮಿತಾ (19) ಮೃತಪಟ್ಟವರು.

ಕಾಯಿನ್‌ ಸರ್ಕಲ್‌ನಿಂದ ಸಿಂಡಿಕೇಟ್‌ ಸರ್ಕಲ್‌ಗೆ ಬೈಕ್‌ ಹಾಗೂ ಸ್ಕೂಟಿ ತೆರಳುತ್ತಿತ್ತು. ಸ್ಕೂಟಿ ಸವಾರ ಸಿಗ್ನಲ್‌ ನೀಡದೆ ಒಮ್ಮೆಲೇ ಬಲಕ್ಕೆ ತಿರುಗಿಸಿದ ಕಾರಣ ಬೈಕ್‌ ಸವಾರ ಸ್ಕೂಟಿಗೆ ಢಿಕ್ಕಿ ಹೊಡೆದಿದ್ದಾನೆ.

ಈ ವೇಳೆ ರಸ್ತೆಗೆ ಬಿದ್ದ ಸಹಸವಾರೆ ಸುಶ್ಮಿತಾ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇವರು ನಗರದ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದರು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!