Friday, April 26, 2024
spot_imgspot_img
spot_imgspot_img

ಶಿರಾಡಿ ಘಾಟಿಯಲ್ಲಿ ಕಾರಿನ ಮೇಲೆ ಒಂಟಿ ಸಲಗ ದಾಳಿ ಯತ್ನ- ಕೂದಲೆಳೆ ಅಂತರದಿಂದ ಪ್ರಯಾಣಿಕರು ಪಾರು!

- Advertisement -G L Acharya panikkar
- Advertisement -

ಸಕಲೇಶಪುರ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಕೆಂಪುಹಳ್ಳ ಬಳಿ ಒಂಟಿ ಸಲಗವೊಂದು ಪ್ರಯಾಣಿಕರ ಕಾರಿನ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಚಾಲಕನ ಚಾಕಚಕ್ಯತೆಯಿಂದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಕಾಡಾನೆ ದಾಳಿಯ ದೃಶ್ಯ ಕಾರಿನ ಮಾಲೀಕನ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕೆಂಪುಹೊಳೆ ರಕ್ಷಿತ ಅರಣ್ಯ ವ್ಯಾಪ್ತಿಯ ಅಡ್ಡಹೊಳೆ ಸಮೀಪ ಕಳೆದ 20 ದಿನಗಳಿಂದ ಕಾಡಾನೆ ರಸ್ತೆ ಬದಿಯಲ್ಲಿಯೇ ಓಡಾಡುತ್ತಿರುವುದರಿಂದ ಪ್ರಯಾಣಿಕರಲ್ಲಿ ಭೀತಿ ಉಂಟಾಗಿದೆ.

ಎರಡು ವಾರಗಳ ಹಿಂದೆ ರಾಜಸ್ಥಾನದ ಲಾರಿ ಚಾಲಕನ ಮೇಲೆ ಆನೆ ದಾಳಿ ಮಾಡಿ ಹತ್ಯೆ ಮಾಡಿತ್ತು.ಕಾರಿನ ಮೇಲೆ ಕಾಡಾನೆ ದಾಳಿ ಮಾಡಲು ನುಗ್ಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೂಡಲೇ ಅದನ್ನು ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಆಗ್ರಹ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಕೆ.ಗೋಪಾಲಯ್ಯ ಕೂಡಲೇ ಈ ವಿಚಾರದ ಬಗ್ಗೆ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿ ಪುಂಡಾನೆಯನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಇನ್ನು 15 ದಿನಗಳ ಹಿಂದೆ ನಡೆದ ಕಾಡಾನೆ ದಾಳಿಯಿಂದ ಮೃತಪಟ್ಟ ರಾಜಸ್ಥಾನ ಮೂಲದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕೂಡಾ ನಾನು ಆಗ್ರಹ ಮಾಡುತ್ತೇನೆ ಎಂದು ಸಕಲೇಶಪುರ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.

- Advertisement -

Related news

error: Content is protected !!