- Advertisement -
- Advertisement -
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಬಳಿ ಎರಡು ಕಾಸರಗೋಡು ಕಡೆಗೆ ಸಾಗುತ್ತಿದ್ದ ಸಿಮೆಂಟ್ ಲೋಡ್ ಇದ್ದ ಲಾರಿಗೆ, ಬೆಳಗಾವಿಯಿಂದ ಸಕ್ಕರೆ ಸಾಗಾಟ ನಡೆಸುತ್ತಿದ್ದ ಲಾರಿ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.
ಲಾರಿ ಚಾಲಕ ಪವಾಡಸದೃಶ ರೂಪದಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಎದುರುಗಡೆಯಿದ್ದ ಸಿಮೆಂಟ್ ಲಾರಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ನಡೆದ ಅಪಘಾತ ನಡೆದಿದೆ.
ಅಪಘಾತ ನಡೆದ ಕಾರಣ ಹೆದ್ದಾರಿಯಲ್ಲಿ ಕೆಲವು ಕಾಲ ಸಂಚಾರಕ್ಕೆ ತಡೆಯಾಯಿತು. ನಂತರ ಸಂಚಾರಿ ಠಾಣಾ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -