Monday, May 6, 2024
spot_imgspot_img
spot_imgspot_img

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣು

- Advertisement -G L Acharya panikkar
- Advertisement -

ಕೇರಳ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರಿಂಜನಮನ್ನು ಕೊಟ್ಟಂಕುಳಂ‌‌ ಎಂಬಲ್ಲಿ ನಡೆದಿದೆ.

ಅಮಲ್ ಅವರ ಪತ್ನಿ ಅಫ್ಸಾನಾ(21) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಆಗಸ್ಟ್ 1ರಂದು ಅಫ್ಸಾನಾ ಅವರು ಫ್ಲ್ಯಾಟ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಬಳಿಕ ಅವರವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಘಟನೆ ಬೆನ್ನಲ್ಲೇ ಕೈಪಮಂಗಲಂ ಪೊಲೀಸರು ಆಕೆಯ ಪತಿ ಅಮಲ್ ಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಫ್ಸಾನಾ ಮತ್ತು ಅಮಲ್ ಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು.

- Advertisement -

Related news

error: Content is protected !!