Friday, April 19, 2024
spot_imgspot_img
spot_imgspot_img

ಉಪ್ಪಿನಂಗಡಿ : ವೃದ್ಧನ ಕೈಯಿಂದ ಹಣದ ಚೀಲ ಎಗರಿಸಲು ಯತ್ನ!! ಮಹಿಳೆಯರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ

- Advertisement -G L Acharya panikkar
- Advertisement -

ಉಪ್ಪಿನಂಗಡಿ : ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯರಿಬ್ಬರು ವೃದ್ದರೊಬ್ಬರ ಕೈಯಿಂದ ಹಣವಿದ್ದ ಚೀಲವನ್ನೇ ರಾಜಾರೋಷವಾಗಿ ಎಳೆಯಲು ಯತ್ನಿಸಿದ ಘಟನೆ ಉಪ್ಪಿನಂಗಡಿಯ ಹೃದಯ ಭಾಗದಲ್ಲಿ ನಡೆದಿದೆ.

ಉಪ್ಪಿನಂಗಡಿಯ ಹೃದಯ ಭಾಗದಲ್ಲಿನ ಅಡಕೆ ಅಂಗಡಿಯಲ್ಲಿ ಅಡಕೆ ಮಾರಾಟ ಮಾಡಿ ದೊರೆತ ಹಣದೊಂದಿಗೆ ಹಿಂತಿರುಗುತ್ತಿದ್ದ ವೃದ್ದರೊಬ್ಬರ ಹಿಂದೆ ಮುಂದೆ ನಿಂತು ಹೊಂಚು ಹಾಕುತ್ತಿದ್ದ ಮಹಿಳೆಯರಿಬ್ಬರ ಪೈಕಿ ಹಿಂಬದಿ ಇದ್ದಾಕೆ ವೃದ್ದರ ಕೈಯಲ್ಲಿದ್ದ ಚೀಲವನ್ನು ಎಳೆಯುತ್ತಿದ್ದಂತೆಯೇ ಜಾಗೃತಗೊಂಡ ವೃದ್ದ ಚೀಲವನ್ನು ಬಲವಾಗಿ ಹಿಡಿದುಕೊಂಡರು. ಯಾರು ಹಣವಿದ್ದ ಚೀಲವನ್ನು ಎಳೆದದ್ದು ಎಂದು ತಿಳಿಯುವಷ್ಠರಲ್ಲಿ ಬೇರೊಂದು ವಿಚಾರದ ಬಗ್ಗೆ ಗಮನ ಸೆಳೆದವರಂತೆ ವರ್ತಿಸಿ ಮಹಿಳೆಯರಿಬ್ಬರೂ ಸ್ಥಳದಿಂದ ನಿರ್ಗಮಿಸುತ್ತಿರುವುದು ಸ್ಥಳದಲ್ಲಿನ ಸಿಸಿ ಕ್ಯಾಮರಾದದಲ್ಲಿನ ದೃಶ್ಯಾವಳಿಯಿಂದ ಸ್ಪಷ್ಠ ವಾಗಿಗೋಚರಿಸುತ್ತಿದೆ.

ಇಂತಹ ಮಹಿಳೆಯರ ಆಗಮನ ಬೇರೆ ಕಡೆಯಲ್ಲು ಆಗಬಹುದು ಎಚ್ಚರವಹಿಸುವುದು ಅಗತ್ಯ ಎನ್ನುವ ದೃಷ್ಟಯಿಂದ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಅಡಕೆ ಅಂಗಡಿ ವರ್ತಕರು ಸಿ ಸಿ ಕ್ಯಾ ಮರಾದ ದೃಶ್ಯಾವಳಿಯನ್ನು ಮಾಧ್ಯಮಕ್ಕೆ ನೀಡಿರುತ್ತಾರೆ.

- Advertisement -

Related news

error: Content is protected !!