Sunday, October 6, 2024
spot_imgspot_img
spot_imgspot_img

ಇಸ್ರೇಲ್ ಆಕ್ರಮಿತ ಪ್ರದೇಶದ ಮೇಲೆ ರಾಕೆಟ್ ದಾಳಿ: ಮಕ್ಕಳು ಸೇರಿ 12 ಮಂದಿ ಸಾವು..!

- Advertisement -
- Advertisement -

ಟೆಲ್ ಅವೀವ್: ಇಸ್ರೇಲ್ ಆಕ್ರಮಿತ ಮಜ್ಜಾಲ್ ಶಾಮ್ಸ್ ಪ್ರದೇಶದ ಮೇಲೆ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಜುಲ್ಲಾ ನಡೆಸಿದ ರಾಕೆಟ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮಕ್ಕಳು ಸೇರಿ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಸಂಜೆ ರಾಕೆಟ್ ನಗರದ ಫುಟ್ಬಾಲ್ ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಬಿದ್ದಿದೆ. ಪರಿಣಾಮ ಮಕ್ಕಳು ಮತ್ತು 10 ರಿಂದ 20 ವರ್ಷದವರೆಗಿನ ಹದಿಹರೆಯದವರು ಸೇರಿದಂತೆ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ 19 ಮಂದಿ ಗಾಯಗೊಂಡಿದ್ದು, 6 ಮಂದಿ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.

ಹಿಜ್ಜುಲ್ಲಾ ನೆಲೆಯಿಂದಲೇ ರಾಕೆಟ್ ಲಾಂಚ್ ಆಗಿದೆ. ದಕ್ಷಿಣ ಲೆಬನಾನ್‌ನ ಚೆಬಾದ ಹಳ್ಳಿಯೊಂದರಿಂದ ರಾಕೆಟ್ ಉಡಾಯಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!