Friday, May 3, 2024
spot_imgspot_img
spot_imgspot_img

ಬೆಂಗಳೂರಿಗೆ ಕಾಲಿಟ್ಟ ರೂಪಾಂತರಿ ವೈರಸ್

- Advertisement -G L Acharya panikkar
- Advertisement -

ಬೆಂಗಳೂರು: ತೀವ್ರ ಆತಂಕ ಸೃಷ್ಟಿಸಿರುವ ಹೊಸ ಬಗೆಯ ರೂಪಾಂತರಿ ಕೊರೋನಾ ವೈರಸ್ ಇದೀಗ ಬೆಂಗಳೂರಿನಲ್ಲೂ ಕಾಣಿಸಿಕೊಂಡಿದೆ.
ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ಏಳು ಜನರಲ್ಲಿ ರೂಪಾಂತರಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಡಿಸೆಂಬರ್ 19 ರಂದು ಭಾರತಕ್ಕೆ ಆಗಮಿಸಿದ್ದ ಬ್ರಿಟನ್ ವಿಮಾನದಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ನಿನ್ನೆ (ಡಿ.24) ಮತ್ತೆ ನಾಲ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.


ಡಿಸೆಂಬರ್12 ರಿಂದ 21 ರವರೆಗೂ ಒಟ್ಟು 1,582 ಜನ ಬ್ರಿಟನ್​ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಪೈಕಿ ಏಳು ಜನರಲ್ಲಿ ಸೋಂಕು ಪತ್ತೆಯಾಗಿರುವ ಕಾರಣ ಬಿಬಿಎಂಪಿ ಅಧಿಕಾರಿಗಳು ಇದೀಗ 1,582 ಜನರಿಗೂ ಆರ್​ಟಿಪಿಸಿಆರ್ ಕೊರೋನಾ ಪರೀಕ್ಷೆ ಮಾಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!