- Advertisement -
- Advertisement -




ರೋಟರಿ ಕ್ಲಬ್ ಬಿ.ಸಿ. ರೋಡ್ ಸಿಟಿ ವತಿಯಿಂದ ಬಂಟ್ವಾಳ ಸಮುದಾಯ ಅರೋಗ್ಯ ಕೇಂದ್ರ (ಆಸ್ಪತ್ರೆ )ಕ್ಕೆ ರೋಟರಿ ಕ್ಲಬ್ ಬಿ.ಸಿ. ರೋಡ್ ಸಿಟಿ ಸದಸ್ಯರಾದ ಪದ್ಮನಾಭ ರೈ, ಕಾರ್ಯದರ್ಶಿ ಮಧುಸೂದನ್ ಶೆಣೈ, ನಿಯೋಜಿತ ಅಧ್ಯಕ್ಷ ದಿವಾಕರ ಶೆಟ್ಟಿಯವರ ಸಹಕಾರದಿಂದ ಕಳೆದ ವರ್ಷ ನಿಧನರಾದ ದಿವಾಕರ ಶೆಟ್ಟಿಯವರ ಧರ್ಮ ಪತ್ನಿ ಸ್ಮರಣಾರ್ಥ ಆಸ್ಪತ್ರೆ ರೋಗಿಗಳ ಉಪಯೋಗಕ್ಕಾಗಿ ವೀಲ್ ಚೇರ್ ಹಾಗೂ ದಾಖಲಾಗಿರುವ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಸಂದರ್ಭದಲ್ಲಿ ದಿವಾಕರ ಶೆಟ್ಟಿರವರ ಪುತ್ರ ಹಾಗೂ ಮೊಮ್ಮಗ, ವೈದ್ಯಾಧಿಕಾರಿಗಳಾದ ಡಾ. ಪುಷ್ಪಲತಾ, ಡಾ. ಚೇತನ್ ರಾಜ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Advertisement -