Tuesday, May 14, 2024
spot_imgspot_img
spot_imgspot_img

ಸಿಂಪಲ್ ಫ್ರೂಟ್ ಕಸ್ಟರ್ಡ್ ರೆಸಿಪಿ

- Advertisement -G L Acharya panikkar
- Advertisement -

ಬೇಸಿಗೆಯ ಸುಡುಬಿಸಿಲಿನಲ್ಲಿ ದಣಿದು ಬಂದಾಗಲೂ ತಂಪಾದ ಪಾನಿಯ ಕುಡಿದರೆ ಮನಸಿಗೆ ಹಿತ ಎನ್ನಿಸುತ್ತದೆ. ಇದಕ್ಕಾಗಿ ಇಲ್ಲಿದೆ ಸುಲಭವಾದ ಫ್ರೂಟ್ ಕಸ್ಟರ್ಡ್ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು:

  1. ಹಾಲು- 2 ಕಪ್
  2. ಸಕ್ಕರೆ- 1/4 ಕಪ್ (ರುಚಿ ನೋಡಿ ಸೇರಿಸಿಕೊಳ್ಳಿ)
  3. ಕಸ್ಟರ್ಡ್ ಪೌಡರ್- 2 ಚಮಚ (ಮಾರುಕಟ್ಟೆಯಲ್ಲಿ ಲಭ್ಯವಿದೆ)
  4. ಬಾಳೆಹಣ್ಣು – 1/4 ಕಪ್(ಕಟ್ ಮಾಡಿಟ್ಟುಕೊಳ್ಳಿ)
  5. ಕಪ್ಪು/ಬಿಳಿ ಸೀಡ್ಲೆಸ್ ದ್ರಾಕ್ಷಿ – 1/4 ಕಪ್
  6. ಮಾವಿನ ಹಣ್ಣು – 1/4 ಕಪ್
  7. ದಾಳಿಂಬೆ – 1/4 ಕಪ್
  8. ಸೇಬು – 1/4 ಕಪ್
  9. ಏಲಕ್ಕಿ – 1/4 ಚಮಚ (ಇನ್ನೂ ನಿಮಗಿಷ್ಟವಾದ ಫ್ರೂಟ್ಸ್‌ ಸೇರಿಸಬಹುದು)

ಮಾಡುವ ವಿಧಾನ:
ಸ್ಟವ್‌ ಮೇಲೆ ಒಂದು ಪಾತ್ರೆಯಲ್ಲಿ 2 ಕಪ್ ಹಾಲು ಹಾಕಿ ಬಿಸಿ ಮಾಡಿ ,ಒಂದು ಕಪ್‍ನಲ್ಲಿ ಕಸ್ಟರ್ಡ್ ಪೌಡರ್‌ಗೆ 3 ಚಮಚ ಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯುತ್ತಿರುವ ಹಾಲಿಗೆ ಬೆರೆಸಿ ,ಅದಕ್ಕೆ ಸಕ್ಕರೆ ಹಾಕಿ ಸ್ವಲ್ಪ ದಪ್ಪ ಹಾಗೂ ಹಳದಿ ಬಣ್ಣ ಬರುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಬೌಲ್ ಗೆ ಹಾಕಿ ತಣ್ಣಗಾಗಲು ಬಿಡಿ, ಹಾಲು ತಣ್ಣಗಾದ ಬಳಿಕ ಅದಕ್ಕೆ ಕಟ್ ಮಾಡಿದ ದ್ರಾಕ್ಷಿ, ಬಾಳೆಹಣ್ಣು, ದಾಳಿಂಬೆ, ಮಾವಿನ ಹಣ್ಣು, ಸೇಬು, ಏಲಕ್ಕಿ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 2 ಗಂಟೆಗಳ ಕಾಲ ಫ್ರಿಡ್ಜ್‍ನಲ್ಲಿ ಇಟ್ಟು ನಂತರ ಸವಿಯಲು ಕೊಡಿ.

- Advertisement -

Related news

error: Content is protected !!