Friday, June 5, 2026
spot_imgspot_img
spot_imgspot_img

ಆರ್‌ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

- Advertisement -
- Advertisement -

ಬೆಂಗಳೂರು: ಆರ್‌ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಂದು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇಂದು ಸಂಜೆ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ. ಕೆಪಿಸಿಸಿ ಇಂದ ಒಂದೇ ಹೆಸರನ್ನ ಶಿಫಾರಸ್ಸು ಮಾಡಲಾಗಿತ್ತು. ಅವರು ಹೆಸರು ಅಂತಿಮವಾಗಿ ಸಂಜೆ ಪ್ರಕಟವಾಗುತ್ತೆ ಎಂದಿದ್ದಾರೆ.

ಇನ್ನು ಕುಸುಮಾ ಅವರ ಅತ್ತೆ ಗೌರಮ್ಮ ವಿರೋಧ ವಿಚಾರವಾಗಿ ಮಾತನಾಡಿ.. ವಿರೋಧ ಮಾಡುವವರ ಬಗ್ಗೆ ನಾನೇನು ಮಾತನಾಡಲ್ಲ. ಅವರು ವಿರೋಧ ಮಾಡಿದ್ದಾರೋ, ಬಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ. ನಾವು ಜನರ ಮುಂದೆ ನಮ್ಮ ಅಭ್ಯರ್ಥಿ ಪರ ಓಟು ಕೇಳ್ತೀವಿ. ಅಂತಿಮವಾಗಿ ಜನರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ.

- Advertisement -

Related news

error: Content is protected !!