Friday, April 26, 2024
spot_imgspot_img
spot_imgspot_img

‘PUC’ ಪ್ರಶ್ನೆ ಪತ್ರಿಕೆಯಲ್ಲೂ’RRR’ ಸಿನಿಮಾದ ಪ್ರಶ್ನೆ.!!

- Advertisement -G L Acharya panikkar
- Advertisement -

ಆರ್‌ಆರ್‌ಆರ್‌’ ಸಿನಿಮಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿ ಮಾಂತ್ರಿಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಜ್ಯೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಬಾಕ್ಸ್‌ ಆಫೀಸ್ ಕೊಳ್ಳೆ ಹೊಡೆದ ಆರ್‌ಆರ್‌ಆರ್, ಹಲವು ದಾಖಲೆಗಳನ್ನು ಬ್ರೇಕ್ ಮಾಡಿ, ತಾನೇ ಹೊಸ ದಾಖಲೆ ನಿರ್ಮಿಸಿತ್ತು. ಇದೀಗ ಪಿಯು ಪ್ರಶ್ನೆ ಪತ್ರಿಕೆಯಲ್ಲೂಆರ್‌ಆರ್‌ಆರ್‌ ಕುರಿತು ಪ್ರಶ್ನೆ ಕೇಳಲಾಗಿದ್ದು, ಆ ಪ್ರಶ್ನೆ ಪತ್ರಿಕೆಯೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

RRR Pre Release events | ఆర్ఆర్ఆర్ ల‌వ‌ర్స్ కు క్రేజీ అప్డేట్‌..ప్రి రిలీజ్  ఈవెంట్స్ తేదీలు ఫిక్స్

ತೆಲಂಗಾಣ ರಾಜ್ಯದ ಇಂಟರ್‌ಮಿಡಿಯೇಟ್ ಬೋರ್ಡ್ (ಪಿಯುಸಿ) ಪರೀಕ್ಷೆಗಳಲ್ಲಿ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾದ ಕುರಿತಂತೆ ಪ್ರಶ್ನೆ ಕೇಳಲಾಗಿದೆ. ಸ್ವಾತಂತ್ರ್ಯಪೂರ್ವದ ಕಥೆಯಿರುವ ಈ ಸಿನಿಮಾವಾಗಿದ್ದು, ಪಿಯು ಪ್ರಶ್ನೆ ಪತ್ರಿಕೆಯಲ್ಲಿ ಆರ್‌ಆರ್‌ಆರ್‌ ಸಿನಿಮಾದಲ್ಲಿನ ಜ್ಯೂನಿಯರ್ ಎನ್‌ಟಿಆರ್‌ ಪಾತ್ರದ ಕುರಿತಂತೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲಾಗಿದೆ. ಇಂಗ್ಲೀಷ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಈ ವಿಚಿತ್ರ ಪ್ರಶ್ನೆ ಕೇಳಲಾಗಿದೆ. ನೀವು ‘ಆರ್‌ಆರ್‌ಆರ್’ ಚಲನಚಿತ್ರವನ್ನು ನೋಡಿದ್ದೀರಿ ಮತ್ತು ಕೋಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಅವರ ಅಭಿನಯವನ್ನು ನೋಡಿದ್ದೀರಿ. ಚಿತ್ರದ ಅದ್ಭುತ ಯಶಸ್ಸಿನ ನಂತರ, ಪ್ರತಿಷ್ಠಿತ ಟಿವಿ ಚಾನೆಲ್‌ನಲ್ಲಿ ಜೂನಿಯರ್ ಎನ್‌ಟಿಆರ್ ಅವರನ್ನು ಸಂದರ್ಶನ ಮಾಡಲು ನಿಮಗೆ ಅವಕಾಶ ಸಿಕ್ಕಿತು ಎಂದು ಈಗ ಊಹಿಸಿಕೊಳ್ಳಿ. ಈಗ, ಚಿತ್ರದ ಯಶಸ್ಸಿನ ನಂತರ ಬರಹಗಾರ, ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಕಾಲ್ಪನಿಕ ಸಂದರ್ಶನವನ್ನು ನಡೆಸಿದರೆ ಹೇಗೆ ನಡೆಸುತ್ತೀರಿ ಎಂಬ ಪ್ರಶ್ನೆ ಕೇಳಲಾಗಿದೆ.

ಇನ್ನು ಮುಂದುವರೆದು ಈ ಕೆಳಗೆ ನೀಡಲಾದ ವಿವರಗಳನ್ನು ಬಳಸಿಕೊಳ್ಳಿ ಅಂತ ಕೊಟ್ಟಿದ್ದು, ಚಿತ್ರದ ಸ್ವರೂಪ, ಚಲನಚಿತ್ರ ನಿರ್ದೇಶಕರೊಂದಿಗಿನ ಅವರ ಸಂಬಂಧ, ಚಿತ್ರದ ಸ್ಕ್ರಿಪ್ಟ್ ಬಗ್ಗೆ, ಇತರ ನಟರ ಒಳಗೊಳ್ಳುವಿಕೆಯ ಬಗ್ಗೆ, ಪ್ರೇಕ್ಷಕರ ಮೇಲೆ ಚಲನಚಿತ್ರದ ಪ್ರಭಾವ ಏನಾಯಿತು? ಚಿತ್ರದ ಬಗ್ಗೆ ಅವರ ಅಭಿಪ್ರಾಯಗಳೇನು? ಇತ್ಯಾದಿಗಳ ಬಗ್ಗೆ ಉತ್ತರಿಸುವಂತೆ ಪ್ರಶ್ನೆ ಕೇಳಲಾಗಿದೆ. ಇತ್ತ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜೂನಿಯರ್‌ ಎನ್‌ಟಿಆರ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಪ್ರಶ್ನೆ ಪತ್ರಿಕೆಯನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇದನ್ನು ನೋಡಿದ ನೆಟ್ಟಿಗರು ಪರ, ವಿರೋಧ ಅಭಿಪ್ರಾಯ ವ್ಯಕ್ತಪಡಿಸಿ, ಕಾಮೆಂಟ್ ಮಾಡುತ್ತಿದ್ದಾರೆ.

- Advertisement -

Related news

error: Content is protected !!