Tuesday, June 9, 2026
spot_imgspot_img
spot_imgspot_img

ಉಕ್ರೇನ್‌ನ ಅತಿ ದೊಡ್ಡ ನೌಕಾ ಹಡಗಿನ ಮೇಲೆ ರಷ್ಯಾ ಡ್ರೋನ್ ದಾಳಿ

- Advertisement -
- Advertisement -

ಮಾಸ್ಕೋ: ಉಕ್ರೇನ್ ನೌಕಾಪಡೆಯ ಗಸ್ತು ಹಡಗಿನ ಮೇಲೆ ರಷ್ಯಾ ಡ್ರೋನ್ ದಾಳಿ ನಡೆಸಿದ ಪರಿಣಾಮ ಉಕ್ರೇನ್‌ನ ನೌಕಾ ಹಡಗು ಮುಳುಗಿದೆ.

ಉಕ್ರೇನ್‌ನ ಅತಿ ದೊಡ್ಡ ಗಸ್ತು ಹಡಗು ಸಿಮ್ಫೆರೊಪೋಲ್ ಡ್ಯಾನ್ಯೂಬ್ ನದಿಯಲ್ಲಿ ಸಂಚರಿಸುತ್ತಿತ್ತು. ಈ ವೇಳೆ ಡ್ರೋನ್ ದಾಳಿ ನಡೆಸಲಾಗಿದೆ ಎಂದು ರಷ್ಯಾ ತಿಳಿಸಿದೆ. ಈ ಹಡಗು ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್‌ಗಳನ್ನು ಹೊಂದಿತ್ತು ಎನ್ನಲಾಗಿದೆ.

ದಾಳಿಯಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಉಕ್ರೇನ್ ನ ಮಾಧ್ಯಮಗಳು ವರದಿ ಮಾಡಿವೆ.

ಸಿಮ್ಫೆರೊಪೋಲ್ ಅನ್ನು 2019 ರಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಎರಡು ವರ್ಷಗಳ ನಂತರ ಉಕ್ರೇನಿಯನ್ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. 2014 ರ ಬಳಿಕ ಉಕ್ರೇನ್ ತಯಾರಿಸಿದ ದೊಡ್ಡ ಹಡಗು ಇದಾಗಿತ್ತು.

ಕೆಲ ತಿಂಗಳಿನಿಂದ ರಷ್ಯಾ ಡ್ರೋನ್ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕಳೆದ ರಾತ್ರಿ ಕ್ಷಿಪಣಿ ದಾಳಿ ನಡೆಸಿ ಉಕ್ರೇನ್‌ನಲ್ಲಿದ್ದ ಡ್ರೋನ್ ಸೌಲಭ್ಯ ಘಟಕವನ್ನು ರಷ್ಯಾ ನಾಶಪಡಿಸಿದೆ.

- Advertisement -

Related news

error: Content is protected !!