Wednesday, July 29, 2026
spot_imgspot_img
spot_imgspot_img

ಸಂಪಾಜೆ: ’ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ಹವ್ಯಾಸಿ ಕಲಾವಿದರು ಯಕ್ಷಗಾನ ಸ್ಪರ್ಧೆ ಪೋಷಕ ಪಾತ್ರದಲ್ಲಿ ರಿಷಿತ್ ರಾಜ್ ಡಿ ವಿಟ್ಲ ಪ್ರಥಮ ಸ್ಥಾನ

- Advertisement -
- Advertisement -

ಸಂಪಾಜೆಯ ಕಲ್ಲು ಗುಂಡಿಯಲ್ಲಿ ನಡೆಯುವ ಯಕ್ಷಗಾನ ಬಹಳಷ್ಟು ವರ್ಷಗಳಿಂದ ತನ್ನದೇ ಆದ ರೀತಿಯಲ್ಲಿ ವಿಶೇಷತೆ ವೈಶಿಷ್ಟತೆಗಳ ಜೊತೆಗೆ ಕಣ್ಮಣ ಸೆಳೆಯುವ ಸುಂದರ ಕಾರ್ಯಕ್ರಮ. ಯಕ್ಷೋತ್ಸವ ಎನ್ನುವ ಈ ದೊಡ್ಡ ಕೂಟದಲ್ಲಿ ಹವ್ಯಾಸಿ ಕಲಾವಿದರು ಯಕ್ಷಗಾನ ಸ್ಪರ್ಧೆಯಲ್ಲಿ ಪೋಷಕ ಪಾತ್ರದಲ್ಲಿ ರಿಷಿತ್ ರಾಜ್ ಡಿ ವಿಟ್ಲ ಪ್ರಥಮ ಸ್ಥಾನ ಪಡೆದಿದ್ದಾರೆ. ಮಯೂರ ಪ್ರತಿಷ್ಠಾನ ಮಂಗಳೂರು ತಂಡದ ಮೂಲಕ ಸ್ಪರ್ಧಿಸಿದ ರಿಷಿತ್ ರಾಜ್ 77 ಹಿರಿಯ ಸ್ಪರ್ಧಿಗಳ ಜೊತೆ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

ರಿಷಿತ್ ರಾಜ್ ಡಿ ವಿಟ್ಲ ಝೀ ಕನ್ನಡ ಡ್ರಾಮಾ ಜೂನಿಯರ್ ಸೀಸನ್ ಐದರ ಫೈನಲಿಸ್ಟ್‌ ಆಗಿದ್ದು, ಯಕ್ಷ ಗುರು ನಾಟ್ಯಮಯೂರಿ ರಕ್ಷಿತ್ ಶೆಟ್ಟಿ ಪಟ್ರೆ ಇವರ ಶಿಷ್ಯರಾಗಿದ್ದಾರೆ. ಸರಕಾರಿ ಪ್ರೌಢಶಾಲೆ (ಆರ್ ಎಂ ಎಸ್ ಎ )ವಿಟ್ಲ ಇಲ್ಲಿಯ ಐದನೇ ತರಗತಿ ವಿದ್ಯಾರ್ಥಿಯಾಗಿರುವ ರಿಷಿತ್‌ ರಾಜ್‌ ರಾಜೇಶ್ ವಿಟ್ಲ ಧನಲಕ್ಷ್ಮಿ ಇವರ ಪುತ್ರರಾಗಿದ್ದಾರೆ.

- Advertisement -

Related news

error: Content is protected !!