Saturday, April 20, 2024
spot_imgspot_img
spot_imgspot_img

ಸಂಸತ್ ಮೇಲೆ ದಾಳಿ ನಡೆದು ಇಂದಿಗೆ 16 ವರ್ಷ : ಹುತಾತ್ಮರಿಗೆ ಶ್ರದ್ಧಾಂಜಲಿ

- Advertisement -G L Acharya panikkar
- Advertisement -

ನವದೆಹಲಿ: 2001ರಲ್ಲಿ ದೇಶದ ಸಂಸತ್ ಭವನದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ವಿಫಲಗೊಳಿಸಿದ ವೀರ ಯೋಧರಿಗೆ ದೇಶ ಇಂದು ನಮನ ಸಲ್ಲಿಸಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ವೀರ ಮರಣವನ್ನಪ್ಪಿದ ಯೋಧರಿಗೆ ಪುಷ್ಪ ನಮನ ಸಲ್ಲಿಸಿದರು.

2001ರಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಯಬಾ ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಯ ಐವರು ಉಗ್ರರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯಲ್ಲಿ ಈ ಐವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.

ಸಂಸತ್ ಅಧಿವೇಶನ ನಡೆಯುತ್ತಿದ್ದಾಗಲೇ ಈ ದಾಳಿ ನಡೆದಿತ್ತು. ದೇಶದಲ್ಲಿ ರಾಜಕೀಯ ನಿರ್ವಾತ ಸೃಷ್ಟಿಸುವುದು ಈ ದಾಳಿಯ ಗುರಿಯಾಗಿತ್ತು.

- Advertisement -

Related news

error: Content is protected !!