Saturday, April 20, 2024
spot_imgspot_img
spot_imgspot_img

ವಿಟ್ಲ: ಲಾಕ್ ಡೌನ್ ಸಂದರ್ಭ ಕೋವಿಡ್ ಪರೀಕ್ಷೆಗೆ ಹೋಗುವವರ ಬಗ್ಗೆ ವಿಶೇಷ ಗಮನಹರಿಸಬೇಕು: ಶಾಸಕ ಸಂಜೀವ ಮಠಂದೂರು

- Advertisement -G L Acharya panikkar
- Advertisement -

ವಿಟ್ಲ: ಲಾಕ್ ಡೌನ್ ಸಂದರ್ಭ ಕೋವಿಡ್ ಪರೀಕ್ಷೆಗೆ ಹೋಗುವವರ ಬಗ್ಗೆ ಗಮನಹರಿಸಬೇಕಾಗುತ್ತದೆ. ಈ ಸಂದರ್ಭ ಜನ ದಟ್ಟಣೆಯಾಗದಂತೆ ನೋಡಬೇಕು.‌ ಈ ಬಗ್ಗೆ ಆರೋಗ್ಯ ಇಲಾಖೆ ಕಂದಾಯ ಇಲಾಖೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ವಿಟ್ಲ ಅತಿಥಿಗೃಹದಲ್ಲಿ ಅಧಿಕಾರಿಗಳೊಂದಿಗೆ ನಡೆದ ಕೋವಿಡ್ ಜಾಗೃತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನರ ಆರೋಗ್ಯದ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುತ್ತಿದ್ದು, ಕೊರೊನಾ ನಿಯಂತ್ರಿಸಲು ವಿವಿಧ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಅವುಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಲಾಕ್ ಡೌನ್ ಸಂದರ್ಭ ಜನರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕು ಎಂದು ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ಮಾತನಾಡಿ ತಾಲೂಕಿನಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿದೆ.

ಕಳೆದ ಬಾರಿ ಸೋಂಕು ಹೆಚ್ಚಾಗಿ ವಯಸ್ಕರಲ್ಲಿ ಪತ್ತೆಯಾಗುತ್ತಿತ್ತು. ಈ ಬಾರಿಯ ಎರಡನೇ ಅಲೆ ಯುವಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಯುವಕರು ನಿರ್ಲಕ್ಷ್ಯ ವಹಿಸಬಾರದು. ಇದೊಂದು ರೂಪಾಂತರಿಕಾ ವೈರಸ್ ಆಗಿದ್ದು, ಗಂಭೀರ ಸ್ವರೂಪ ಹೊಂದಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದುವರೆಗೂ 50 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ವಿಟ್ಲ ವ್ಯಾಪ್ತಿಯಲ್ಲಿ 28 ಸಕ್ರಿಯ ಪ್ರಕರಣಗಳಿವೆ. 34 ಮಂದಿ ಹೋಂ ಐಸೋಲೇಸನ್ ನಲ್ಲಿದ್ದು, ಇಬ್ಬರು ನಿಧನ ಹೊಂದಿದ್ದಾರೆಎಂದು ಮಾಹಿತಿ ನೀಡಿದರು. ವಿಟ್ಲ ಪೇಟೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡುತ್ತಿದೆ ಈ ಬಗ್ಗೆ ಜಾಗೃತೆ ಅಗತ್ಯ ಎಂದರು.

ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್, ತಾಲೂಕು ಪಂಚಾಯತ್ ಇಓ ರಾಜಣ್ಣ, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷ ದಿವಾಕರ ಸ್ವಾಗತಿಸಿದರು. ಪ್ರಕಾಶ್ ವಂದಿಸಿದರು.

driving
- Advertisement -

Related news

error: Content is protected !!