Monday, April 29, 2024
spot_imgspot_img
spot_imgspot_img

ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ದೇಶದ ಪುನರುತ್ಥಾನಕ್ಕೆ ಸಂಸ್ಕೃತ ಭಾಷೆ ಅಗತ್ಯ, ವಿಜ್ಞಾನವು ವೇದಶಾಸ್ತ್ರದಲ್ಲಿ ಅಡಗಿದೆ ಎಂದು ಸಂಸ್ಕೃತದ ಮಹತ್ವವನ್ನು ಸಂಸ್ಕೃತ ಭಾರತೀಯ ಕಾರ್ಯಕರ್ತೆ ಮಮತೆಶ್ವರೀಯವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಸಂಸ್ಕೃತ ಭಾಷಾ ಸರಳತೆ, ಸುಭಾಷಿತಗಳ ಬಗ್ಗೆ ಹಿರಿಯ ಸಂಸ್ಕೃತ ಅಧ್ಯಾಪಕ ಕೃಷ್ಣ ಭಟ್ ರವರು ಹಿತವಚನಗಳನ್ನಾಡಿದರು. ಭಾಷೆಗಳ ಸುಸ್ಪಷ್ಟತೆಗೆ ಸಂಸ್ಕೃತದ ಕೊಡುಗೆ ಅಪಾರ, ಸಂಸ್ಕೃತ ಭಾಷಾ ಪ್ರಭುದ್ಧತೆ ರಾಷ್ಟ್ರದಲ್ಲಿ ಮತ್ತೂಮ್ಮೆ ವೈಭವನ್ನು ಸಾರಲಿ ಎಂದು ಶಾಲಾ ಪ್ರಾಂಶುಪಾಲ ಜಯರಾಮ ರೈ ರವರು ತಿಳಿಸಿದರು. ಸಂಸ್ಕೃತ ಸಕ್ಕರೆಯಷ್ಟು ಸಿಹಿ, ಅಗೆದಷ್ಟು ಮುಗಿಯದ ಭಂಡಾರವಿದು ಎಂದು ನಿರ್ದೇಶಕ ಹಸನ್ ವಿಟ್ಲ ರವರು ವಿದ್ಯಾರ್ಥಿಗಳಿಗೆ ಸಲಹೆಯನಿತ್ತರು. ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಪ್ರಕಾಶ್ ಕುಕ್ಕಿಲರವರು ಸಂಸ್ಕೃತ ಸಂಸ್ಕಾರಕ್ಕೆ ದಾರಿ ತೋರುತ್ತದೆ ಎಂದರು.

ಕಾರ್ಯಕ್ರಮದಲ್ಲಿ 2022-23 ನೇ ಸಾಲಿನ ಹತ್ತನೇ ತರಗತಿಯ ಸಂಸ್ಕೃತ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಶ್ರೀವರ್ಣ, ಆದರ್ಶ್ ಮರಡಿತ್ತಾಯ, ತೇಜಸ್ವಿ ತೆಂಕಬೈಲು ಹಾಗೂ ಅಖಿಲೇಶ್ ಎಂ ರನ್ನು ಗೌರವಿಸಲಾಯಿತು. ಸಂಸ್ಕೃತೋತ್ಸವದ ಅಂಗವಾಗಿ ನಡೆಸಿದ ‘ಸ್ಮರಣ ಶಕ್ತಿ ಸ್ಪರ್ಧೆಯ’ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

ಅಥಿತಿಗಳಾಗಿ ನಿರ್ದೇಶಕ ಮೋನಪ್ಪ ಶೆಟ್ಟಿ, ಆಡಳಿತ ಅಧಿಕಾರಿ ರಾಧಾಕೃಷ್ಣ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸಂಸ್ಕೃತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶ್ರೀವಿದ್ಯಾ ಸ್ವಾಗತಿಸಿ, ಕೇಶವ ಶ್ರವಣ ರವರು ವಂದಿಸಿದರು. ಒಟ್ಟು ಕಾರ್ಯಕ್ರಮವು ಸಂಸ್ಕೃತ ವಾತಾವರಣವನ್ನು ರೂಪಿಸಿದ್ದು, ಪೂರ್ಣ ಸಂಸ್ಕೃತ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಮೊಹಮ್ಮದ್ ರಾಝೀ ಹಾಗೂ ನರೇಶ ನಡೆಸಿಕೊಟ್ಟರು. ಸಂಸ್ಕೃತ ಶಿಕ್ಷಕಿ ಸಂಧ್ಯಾರವರು ಕಾರ್ಯಕ್ರಮ ಸಂಯೋಜಿಸಿದ್ದರು. ಶಿಕ್ಷಕ – ಶಿಕ್ಷಕರೇತರ ವೃಂದದವರು ಸಹಕರಿಸಿದರು.

- Advertisement -

Related news

error: Content is protected !!