- Advertisement -
- Advertisement -
ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಎಂಜಿನಿಯರ್ ಲ. ಸಂತೋಷ್ ಶೆಟ್ಟಿ ಪೆಲ್ತಡ್ಕ ಎಂ.ಜೆ.ಎಫ್ 2020-21 ರ ಸಾಲಿನ ಲಯನ್ಸ್ ಜಿಲ್ಲೆ 317ಡಿ ಇದರ ಪ್ರಾಂತೀಯ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಈ ಪ್ರಾಂತೀಯದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ, ಪುತ್ತೂರು, ವಿಟ್ಲ, ಪುತ್ತೂರು ಕಾವು, ಕಡಬ, ಸುಳ್ಯ, ಸಂಪಾಜೆ, ಪಂಜ, ಗುತ್ತಿಗಾರು, ಜಾಲ್ಸೂರು ಕ್ಲಬ್ ಗಳನ್ನು ಒಳಗೊಂಡಿದೆ. ಈ ಕ್ಲಬ್ ಗಳಿಗೆ ಪ್ರಾಂತೀಯ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಅವರು ಸೇವೆ ಸಲ್ಲಿಸಲಿದ್ದಾರೆ.
ಸಂತೋಷ್ ಶೆಟ್ಟಿಯವರು ವಿಟ್ಲ ಲಯನ್ಸ್ ಕ್ಲಬ್ ನ ತನ್ನ ಅಧ್ಯಕ್ಷಾವಧಿಯಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಜನಮನ್ನಣೆಗಳಿಸಿದ್ದರು ಹಾಗೂ 47 ವರ್ಷದಲ್ಲಿ ಆಗದಂತ ನಿವೇಶನ ಖರೀದಿ ಹಾಗೂ ಲಯನ್ಸ್ ಸ್ವಂತ ಕಚೇರಿ ಕಟ್ಟಡ ನಿರ್ಮಾಣ ಕಾರ್ಯ ಸಂತೋಷ್ ಶೆಟ್ಟಿಯವರ ಆಡಳಿತಾವಧಿಯಲ್ಲಿ ಆಗಿದೆ. ವಿಟ್ಲ ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು.
- Advertisement -