Tuesday, April 30, 2024
spot_imgspot_img
spot_imgspot_img

ರಾಜ್ಯಸಭೆಯ ಚುನಾವಣೆಯಲ್ಲಿ ರಾಜ್ಯದ ನಾಲ್ಕು ಸ್ಥಾನಗಳಿಗೆ ರಾಜ್ಯದಿಂದ 5 ಅಭ್ಯರ್ಥಿಗಳು ಕಣಕ್ಕೆ…

- Advertisement -G L Acharya panikkar
- Advertisement -

ಬೆಂಗಳೂರು: ಭಾರತ ಚುನಾವಣಾ ಆಯೋಗ ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆಯನ್ನು ಘೋಷಿಸಿದ್ದು,ಫೆಬ್ರವರಿ 27ರಂದು ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳು ಸೇರಿದಂತೆ 15 ರಾಜ್ಯಗಳ 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ರಾಜ್ಯಸಭೆಯ 56 ಸ್ಥಾನಗಳಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಸ್ಥಾನಗಳು ಸಹ ಒಳಗೊಂಡಿವೆ. ರಾಜ್ಯಸಭೆಯ ಈ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ರಾಜ್ಯದಿಂದ ಅಂತಿಮವಾಗಿ 5 ಅಭ್ಯರ್ಥಿಗಳಾದ ಅಜಯ್ ಮಕನ್,ಡಿ. ಕುಪೇಂದ್ರ ರೆಡ್ಡಿ,ಜಿ.ಸಿ. ಚಂದ್ರಶೇಖರ್,ನಾರಾಯಣಸಾ ಕೆ. ಭಾಂಡಗೆ,ಡಾ. ಸೈಯದ್ ನಾಸೀರ್ ಕಣದಲ್ಲಿದ್ದಾರೆ.

ವಿಧಾನಸಭೆಯ 224 ಶಾಸಕರು ಮತದಾರರಾಗಿದ್ದು, ಫೆಬ್ರವರಿ 27 ರಂದು ವಿಧಾನಸೌಧದಲ್ಲಿ ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ 5:00 ಗಂಟೆಗೆ ಅಲ್ಲಿಯೇ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅನಾಯಾಸವಾಗಿ ಮೂರು ರಾಜ್ಯಸಭಾ ಸ್ಥಾನ ಗೆಲ್ಲಬಹುದು. ರಾಜ್ಯದಲ್ಲಿ 65 ಶಾಸಕರನ್ನು ಹೊಂದಿದ ಬಿಜೆಪಿ ಒಂದು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದೆ. ಈ ಒಂದು ಸ್ಥಾನ ಗೆಲ್ಲಲು 45 ಶಾಸಕರ ಬೆಂಬಲ ಅಗತ್ಯವಿದೆ. .

- Advertisement -

Related news

error: Content is protected !!